ಆಸ್ಟ್ರೇಲಿಯಾದ ಅತ್ಯಂತ ಹಿರಿಯ ವ್ಯಕ್ತಿಯಾದ 111 ವರ್ಷದ ಡೆಕ್ಸ್ಟರ್ ಕ್ರುಗರ್ ಹೆಸರಿನ ಈ ವ್ಯಕ್ತಿ ತನ್ನ ದೀರ್ಘಾಯುಷ್ಯದ ಗುಟ್ಟನ್ನು ತಿಳಿಸಿದ್ದಾರೆ. ಕೋಳಿಗಳ ಮೆದುಳು ತಿನ್ನುವುದು ಸೇರಿದಂತೆ ಇನ್ನೂ ಹಲವಾರು ವಿಚಾರಗಳನ್ನು ಈತ ಹಂಚಿಕೊಂಡಿದ್ದಾರೆ.
ಮೊದಲ ವಿಶ್ವ ಮಹಾಯುದ್ಧದಲ್ಲಿ ಹೋರಾಡಿದ್ದ ಜಾಕ್ ಲಾಕೆಟ್ ಹೆಸರಿನ ವ್ಯಕ್ತಿಯೊಬ್ಬರು 111 ವರ್ಷ 123 ದಿನ ಬದುಕಿ, 2002ರಲ್ಲಿ ನಿಧನರಾಗಿದ್ದರು.
ಕ್ವೀನ್ಸ್ಲೆಂಡ್ನ ಗ್ರಾಮೀಣ ಪ್ರದೇಶದಲ್ಲಿ ತಮ್ಮ ನರ್ಸಿಂಗ್ ಹೋಂನಲ್ಲಿ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಕ್ರುಗರ್, ಪೌಲ್ಟ್ರಿ ಖಾದ್ಯಗಳೇ ತಮ್ಮ ದೀರ್ಘಾಯುಷ್ಯದ ಗುಟ್ಟು ಎಂದಿದ್ದಾರೆ. “ಕೋಳಿಯ ಮೆದುಳು. ನಿಮಗೆ ಗೊತ್ತೇ? ಕೋಳಿಗಳಿಗೆ ತಲೆ ಇದೆ. ಮತ್ತು ಅಲ್ಲಿ ಒಂದು ಮೆದುಳಿದೆ. ಮತ್ತು ಅವುಗಳು ಬಹಳ ರುಚಿಕರ” ಎಂದು ಕ್ರುಗರ್ ತಿಳಿಸುತ್ತಾರೆ.
ದಂಗಾಗಿಸುತ್ತೆ ಅವಳಿ ಸಹೋದರಿಯರು ಪಡೆದಿರುವ ವಿದ್ಯಾರ್ಥಿ ವೇತನ
ಈ ಬಗ್ಗೆ ಮಾತನಾಡುವ 74 ವರ್ಷ ವಯಸ್ಸಿನ ಅವರ ಪುತ್ರ ಗ್ರೆಗ್, ತಮ್ಮ ತಂದೆ ಸರಳವಾದ ರೀತಿಯಲ್ಲಿ ಹೊರಜಗತ್ತಿನಲ್ಲೇ ಹೆಚ್ಚು ದಿನಗಳನ್ನು ಕಳೆಯುತ್ತಾ ಬಂದಿರುವುದೇ ಅವರ ದೀರ್ಘಾಯುಷ್ಯದ ಗುಟ್ಟು ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಬುಕ್ ಆಫ್ ರೆಕಾರ್ಡ್ಸ್ನ ಸ್ಥಾಪಕರಾದ ಜಾನ್ ಟೇಲರ್ ಅವರು ಖುದ್ದು ಈ ಬಗ್ಗೆ ಖಾತ್ರಿಪಡಿಸಿದ್ದು, ಕ್ರುಗರ್ ಅವರು ಆಸ್ಟ್ರೇಲಿಯಾದ ಅತ್ಯಂತ ಹಿರಿಯ ಪುರುಷ ಎಂದಿದ್ದಾರೆ. ಈ ಹಿಂದೆ, 2002ರಲ್ಲಿ ನಿಧನರಾಗಿದ್ದ ಕ್ರಿಸ್ಟಿನಾ ಕುಕ್ ಹೆಸರಿನ ಮಹಿಳೆಯೊಬ್ಬರು 114 ವರ್ಷ 148 ದಿನಗಳ ಕಾಲ ಬದುಕಿದ್ದರು.