ಕೋವಿಡ್-19 ಸೋಂಕಿಗೆ ಜನರು ಭಯಬೀಳುತ್ತಿದ್ದರೆ ಮತ್ತೊಂದೆಡೆ ಸಾಂಕ್ರಮಿಕದ ವಿರುದ್ಧ ಹಿರಿಯ ನಾಗರಿಕರು ಹೋರಾಡಿ ಗೆದ್ದು ಬಂದ ಅನೇಕ ನಿದರ್ಶನಗಳು ವರದಿಯಾಗುತ್ತಲೇ ಇವೆ. ಇದರಿಂದ ಸೋಂಕಿನ ಕುರಿತಾಗಿ ಇದ್ದ ಜೀವಭಯಗಳೆಲ್ಲಾ ಕರಗಿ ಜನರಲ್ಲಿ ಹೊಸ ವಿಶ್ವಾಸ ಗರಿಗೆದರುತ್ತಿದೆ.
ತಮ್ಮ 105ನೇ ವಯಸ್ಸಿನಲ್ಲಿ ಸೋಂಕಿನ ವಿರುದ್ಧದ ಯುದ್ಧದಲ್ಲಿ ಗೆದ್ದು ಬಂದ ಲೂಸಿಯಾ ಡೆಕ್ಲರ್ಕ್ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಆರೋಗ್ಯಕರ ಜೀವನ ಶೈಲಿ ಹಾಗೂ ಒಳ್ಳೆಯ ಹವ್ಯಾಸಗಳು ತನ್ನ ಸುದೀರ್ಘ ಆಯುಷ್ಯದ ಗುಟ್ಟೆಂದು ಹೇಳಿರುವ ಲೂಸಿಯಾ, ಜಿನ್‌ನಲ್ಲಿ ಅದ್ದಿದ ಒಣದ್ರಾಕ್ಷಿ ಸೇವನೆಯಿಂದ ಸೋಂಕಿನ ವಿರುದ್ಧ ಹೋರಾಡಲು ಒಂದಷ್ಟು ಬಲ ಸಿಕ್ಕಿದೆ ಎಂದಿದ್ದಾರೆ.
ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ
ಪ್ರತಿ ಬೆಳಿಗ್ಗೆ ಜಿನ್‌ನಲ್ಲಿ ಅದ್ದಿದ ಒಂಬತ್ತು ದ್ರಾಕ್ಷಿಗಳನ್ನು ತಿನ್ನುತ್ತಾ ಬಂದಿರುವುದಾಗಿ ತಿಳಿಸಿದ ಲೂಸಿಯಾ, ಜಂಕ್‌ಫುಡ್‌ಗಳನ್ನು ಸಂಪೂರ್ಣವಾಗಿ ವರ್ಜಿಸಿರುವುದಾಗಿ ಹೇಳಿದ್ದಾರೆ.
ನ್ಯೂಜೆರ್ಸಿಯ ನರ್ಸಿಂಗ್ ಹೋಂ ಒಂದರಲ್ಲಿ ಇರುವ ಲೂಸಿಯಾ, ಅಲ್ಲಿರುವ ಅತ್ಯಂತ ಹಿರಿಯ ವಾಸಿಯಾಗಿದ್ದಾರೆ. ಇದೇ ವರ್ಷದ ಜನವರಿ 25ರಂದು ಲೂಸಿಯಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.