ಕೆಲವರಿಗೆ ಕೆಲವೊಂದು ಆಸೆಗಳಿರುತ್ತವೆ. ಆದರೆ ಕೆಲವರಿಗೆ ಅದು ಕೊನೆಯ ತನಕ ಈಡೇರುವುದಿಲ್ಲ. ಆದರೆ ಇನ್ನು ಕೆಲವರಿಗೆ ತಮ್ಮ ಕೊನೆ ಆಸೆ ಕೊನೆಯ ದಿನದಲ್ಲಾದರೂ ಈಡೇರುತ್ತವೆ.
ಇದೇ ರೀತಿ ಹಲವು ದಶಕಗಳ ಆಸೆಯನ್ನು 103 ವರ್ಷದಲ್ಲಿ ಈಡೇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ವೃದ್ಧೆಯ ಆಸೆ ಏನೆಂದರೆ, ಆಕೆಯ ಕೈ ಮೇಲೆ ಟ್ಯಾಟು ಹಾಕಿಸಿಕೊಳ್ಳುವುದಂತೆ.
ಅಮೆರಿಕದ ಮಿಷಿಗನ್ನ ಡೊರೊಟಿ ಪೊಲಾಕ್ ಎನ್ನುವ ವೃದ್ಧೆಯ ಆಸೆ ಕೈಮೇಲೆ ಶಾಶ್ವತವಾದ ಟ್ಯಾಟು ಹಾಕಿಸಿಕೊಳ್ಳುವುದಾಗಿತ್ತು. ಆದರೆ ಇಷ್ಟು ದಿನ ಇದಾಗಿರಲಿಲ್ಲ. ಕೊನೆಗೆ 103 ವರ್ಷದ ಹುಟ್ಟುಹಬ್ಬದ ವೇಳೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಈ ಬಗ್ಗೆ ಅವರ ಮರಿ ಮೊಮ್ಮಗಳು ಮಾತನಾಡಿದ್ದು, ನರ್ಸಿಂಗ್ ಹೋಮ್ನಲ್ಲಿ ಇದ್ದರಿಂದ ಖಿನ್ನತೆಗೆ ಒಳಗಾಗಿದ್ದರು. ವೈದ್ಯರು ಮನೆಗೆ ಕರೆದುಕೊಂಡ ಹೋಗಲು ಅವಕಾಶ ನೀಡಿದಾಗ, ಈ ಟ್ಯಾಟು ಹಾಕಿಸಲಾಗಿದೆ. ಈ ವೇಳೆ ಅಜ್ಜಿಯ ಸಂತಸಕ್ಕೆ ಪಾರವೇ ಇರಲಿಲ್ಲ ಎಂದಿದ್ದಾಳೆ.
https://www.facebook.com/teresa.zavitzjones/posts/10217573758923107