alex Certify 103 ನೇ ವಯಸ್ಸಿನಲ್ಲಿ ತನ್ನ ಆಸೆ ಪೂರೈಸಿಕೊಂಡ ವೃದ್ದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

103 ನೇ ವಯಸ್ಸಿನಲ್ಲಿ ತನ್ನ ಆಸೆ ಪೂರೈಸಿಕೊಂಡ ವೃದ್ದೆ

ಕೆಲವರಿಗೆ ಕೆಲವೊಂದು ಆಸೆಗಳಿರುತ್ತವೆ. ಆದರೆ ಕೆಲವರಿಗೆ ಅದು ಕೊನೆಯ ತನಕ ಈಡೇರುವುದಿಲ್ಲ.‌ ಆದರೆ ಇನ್ನು ಕೆಲವರಿಗೆ ತಮ್ಮ ಕೊನೆ ಆಸೆ ಕೊನೆಯ ದಿನದಲ್ಲಾದರೂ ಈಡೇರುತ್ತವೆ.

ಇದೇ ರೀತಿ ಹಲವು ದಶಕಗಳ ಆಸೆಯನ್ನು 103 ವರ್ಷದಲ್ಲಿ ಈಡೇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ವೃದ್ಧೆಯ ಆಸೆ ಏನೆಂದರೆ, ಆಕೆಯ ಕೈ ಮೇಲೆ ಟ್ಯಾಟು ಹಾಕಿಸಿಕೊಳ್ಳುವುದಂತೆ.

ಅಮೆರಿಕದ ಮಿಷಿಗನ್‌ನ ಡೊರೊಟಿ ಪೊಲಾಕ್ ಎನ್ನುವ ವೃದ್ಧೆಯ ಆಸೆ ಕೈಮೇಲೆ ಶಾಶ್ವತವಾದ ಟ್ಯಾಟು ಹಾಕಿಸಿಕೊಳ್ಳುವುದಾಗಿತ್ತು. ಆದರೆ ಇಷ್ಟು ದಿನ ಇದಾಗಿರಲಿಲ್ಲ‌. ಕೊನೆಗೆ 103 ವರ್ಷದ ಹುಟ್ಟುಹಬ್ಬದ ವೇಳೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಈ ಬಗ್ಗೆ ಅವರ ಮರಿ ಮೊಮ್ಮಗಳು ಮಾತನಾಡಿದ್ದು, ನರ್ಸಿಂಗ್ ಹೋಮ್‌ನಲ್ಲಿ ಇದ್ದರಿಂದ ಖಿನ್ನತೆಗೆ ಒಳಗಾಗಿದ್ದರು. ವೈದ್ಯರು ಮನೆಗೆ ಕರೆದುಕೊಂಡ ಹೋಗಲು ಅವಕಾಶ ನೀಡಿದಾಗ, ಈ ಟ್ಯಾಟು ಹಾಕಿಸಲಾಗಿದೆ. ಈ ವೇಳೆ ಅಜ್ಜಿಯ ಸಂತಸಕ್ಕೆ ಪಾರವೇ ಇರಲಿಲ್ಲ ಎಂದಿದ್ದಾಳೆ.

One step closer. She's killing me with her giddiness. ? #GiddyGranny

Posted by Teresa Gomez Zavitz-Jones on Friday, August 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...