ಇಲಿನಾಯ್ಸ್: ವಿಶ್ವದ ಅತಿ ಹಿರಿಯ ಸ್ಕೂಬಾ ಡೈವರ್ ಎಂದು ವಿಶ್ವ ದಾಖಲೆ ಬರೆಯುವ ಸಲುವಾಗಿ ಶತಾಯುಷಿ ವೃದ್ಧ ಸಮುದ್ರದಾಳಕ್ಕಿಳಿದ ಘಟನೆ ದಕ್ಷಿಣ ಬೆಲೊಯ್ಟ್ ನ ಇಲ್ಲಿನೊಯ್ಸ್ ನಲ್ಲಿ ನಡೆದಿದೆ.
ರಾಕ್ ಫರ್ಡ್ ಎಂಬ ಊರಿನ ಬಿಲ್ ಲ್ಯಾಂಬರ್ಟ್ ಎಂಬುವವರು ಭಾನುವಾರ ನೂರು ವರ್ಷಕ್ಕೆ ಕಾಲಿಟ್ಟಿದ್ದರು. ಸೋಮವಾರ ಅವರು ದಕ್ಷಿಣ ಬೈಲೊಟ್‌ನ ಪಿಯರಲ್ ಲೇಕ್ ನಲ್ಲಿ 27 ನಿಮಿಷ ಸ್ಕೂಬಾ ಡೈವಿಂಗ್ ಮಾಡಿ ದಾಖಲೆ ಬರೆದರು.
ಈ ಸನ್ನಿವೇಶ ಕಣ್ತುಂಬಿಕೊಳ್ಳಲು ಅವರ ಮಗಳು, ಅಳಿಯ ಬೋಸ್ಟನ್ ನಿಂದ, ಮೊಮ್ಮಗಳು ನ್ಯೂಯಾರ್ಕ್ ನಿಂದ ಆಗಮಿಸಿದ್ದರು. ಲ್ಯಾಂಬರ್ಟ್ ಅವರ ಹಲ ಸ್ನೇಹಿತರೂ ಜತೆಯಾದರು.
ಲ್ಯಾಂಬರ್ಟ್ ಅವರು ತಮ್ಮ 98 ನೇ ವಯಸ್ಸಿನಲ್ಲಿ ಮೆಕ್ಸಿಕೊದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದರು. ಆದರೆ, ದಾಖಲೆಗಾಗಿ ಅರ್ಜಿ ಹಾಕಿರಲಿಲ್ಲ. ಸೋಮವಾರ ಅವರು ವಿಶ್ವ ದಾಖಲೆಗೆ ಅರ್ಹವಾಗಲು 20 ನಿಮಿಷ ಸ್ಕೂಬಾ ಡೈವಿಂಗ್ ಮಾಡಬೇಕಿತ್ತು.
ಅದಕ್ಕೂ ಹೆಚ್ಚು ಕಾಲ 27 ನಿಮಿಷ ನೀರಿನ ಒಳಗಿದ್ದರು. ಇನ್ನು 101 ನೇ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ದಾಖಲೆ ನಿರ್ಮಿಸುವ ಇಚ್ಛೆಯನ್ನು ಅವರು ಹೊಂದಿದ್ದಾರೆ.
ಇದುವರೆಗೆ ತಮ್ಮ 96 ನೇ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ಬ್ರಿಟಿಷ್ ವ್ಯಕ್ತಿ ವಲ್ಲಾಸ್ ರೈಮಂಡ್ ವೂಲಿ ಅವರ ಹೆಸರಿನಲ್ಲಿ ವಿಶ್ವದ ಅತಿ ಹಿರಿಯ ಸ್ಕೂಬಾ ಡೈವರ್ ಎಂಬ ದಾಖಲೆ ಇತ್ತು. ಲ್ಯಾಂಬರ್ಟ್ ಅವರು ಅದನ್ನು ಮುರಿದಿದ್ದಾರೆ.
https://www.facebook.com/pearllakeresort/posts/3453745138026406