ಇದು ನೋಡೋಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ ಜರ್ಮನಿಯಲ್ಲಿರುವ ಈ ದೈತ್ಯ ಆಮೆ ರೋಲರ್ ಬೋರ್ಡ್ನಲ್ಲಿ ಓಡಾಡುವ ಮೂಲಕವೇ ಸುದ್ದಿಯಾಗಿದೆ.
ಅಂದಹಾಗೆ ಮನರಂಜನೆಗಾಗಿ ಆಮೆಗೆ ಈ ರೋಲರ್ ಬೋರ್ಡ್ನ್ನು ನೀಡಲಾಗಿಲ್ಲ. ಆದರೆ ಇದಕ್ಕೆ ದೈತ್ಯ ಚಿಪ್ಪನ್ನ ಹೊರೋದು ಕಷ್ಟವಾಗಿದ್ದರಿಂದ ವೈದ್ಯರು ಈ ರೀತಿ ಮಾಡಿದ್ದಾರೆ.
23 ವರ್ಷದ ಹೆಲ್ಮುತ್ ಹೆಸರಿನ ಈ ಗಂಡು ಆಮೆ ಬರೋಬ್ಬರಿ 100 ಕೆಜಿ ತೂಕವನ್ನ ಹೊಂದಿದೆ. ಅಲ್ಲದೇ ಈ ಆಮೆಯು ಕಳೆದ ಕೆಲ ದಿನಗಳಿಂದ ಕೀಲುನೋವಿನ ಸಮಸ್ಯೆಯಿಂದ ಬಳಲುತ್ತಿತ್ತು.
ಜರ್ಮನಿಯ ನಾರ್ತ್ ರೈನ್ ವೆಸ್ಟ್ಪಾಲಿಯಾದಲ್ಲಿರುವ ಜೂಮ್ ಎರ್ಲೆಬ್ನಿಸ್ವೆಲ್ಟ್ ಜೆಲ್ಸೆನ್ಕಿರ್ಚೆನ್ ನಲ್ಲಿ ಈ ದೈತ್ಯ ಆಮೆಗೆ ಚಿಕಿತ್ಸೆಯನ್ನ ನೀಡಲಾಗ್ತಿದೆ. ಈ ಆಮೆಯ ಮುಂದಿನ ಕಾಲುಗಳಲ್ಲಿ ಸಮಸ್ಯೆಗಳಿದ್ದು ಇದೀಗ ರೋಲರ್ ಬೋರ್ಡ್ ಮೂಲಕ ಓಡಾಡುತ್ತಿದೆ. ಈ ವಿಡಿಯೋವನ್ನ ಮೃಗಾಲಯವು ತನ್ನ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿದೆ.
ಹೆಲ್ಮುತ್ ತನ್ನ ಭುಜದ ಕೀಲುಗಳಲ್ಲಿ ಅದರಲ್ಲೂ ವಿಶೇಷವಾಗಿ ಬಲಭಾಗದಲ್ಲಿ ಸಮಸ್ಯೆಯನ್ನ ಹೊಂದಿತ್ತು. ಇದಕ್ಕೆ ದೀರ್ಘಾವಧಿ ತರಬೇತಿಯ ಅವಶ್ಯಕತೆ ಇದೆ. ಹೆಲ್ಮುತ್ ಕೂಡ ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾನೆ ಎಂದು ಮೃಗಾಲಯದ ವಕ್ತಾರ ಹೇಳಿದ್ದಾರೆ.
https://www.facebook.com/ZoomErlebniswelt/videos/128779379207906/?t=0