ಮಕ್ಕಳ ಹಾಲು ಹಲ್ಲುಗಳು ಬಿದ್ದಾಗ ಅದನ್ನು ಅವರ ದಿಂಬಿನ ಕೆಳಗೆ ಇಡುವುದು ಸಾಮಾನ್ಯವಾಗಿ ಪಾಲಿಸುವ ಒಂದು ನಂಬಿಕೆ. ಇಂಥ ನೆನಪುಗಳನ್ನು ಬಹಳಷ್ಟು ಮಂದಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಆದರೆ ಕೆನಡಾದ ಹತ್ತು ವರ್ಷದ ಈ ಬಾಲಕನ ಕೇಸ್ ಭಿನ್ನವಾದದ್ದು. ಒಂಟಾರಿಯೋದ ಪಪೀಟರ್‌ಬೊರೋದ ಲ್ಯೂಕ್ ಬೌಲ್ಟನ್ ಹೆಸರಿನ ಈ ಬಾಲಕನ ಬಾಯಿಂದ 2.6 ಸೆಂಮೀ ಉದ್ದದ ಹಾಲು ಹಲ್ಲು ಬಿದ್ದಿದ್ದು, ಅದೀಗ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದೆ. ಜಗತ್ತಿನ ಅತಿ ಉದ್ದದ ಹಾಲುಹಲ್ಲು ಈತನದ್ದು.
ಸೆಪ್ಟೆಂಬರ್ 17, 2019ರಲ್ಲಿ ಬಾಲಕನಿಗೆ ಎಂಟು ವರ್ಷ ವಯಸ್ಸಾಗಿದ್ದ ವೇಳೆ ಆತನ ಬಾಯಿಂದ ಈ ಹಲ್ಲನ್ನು ವೈದ್ಯ ಕ್ರಿಸ್ ಮ್ಯಾಕ್‌ಆರ್ಥರ್ ಅವರು ಹೊರತೆಗೆದಿದ್ದರು. ಅಂದಿನಿಂದ ತನ್ನ ಈ ಹಲ್ಲನ್ನು ಲ್ಯೂಕ್ ತನ್ನ ಬಳಿಯೇ ಸೇಫ್ ಆಗಿ ಇಟ್ಟುಕೊಂಡಿದ್ದಾನೆ.
ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು
ಈ ಹಲ್ಲನ್ನು ತೆಗೆದ ಬಳಿಕ ಲ್ಯೂಕ್‌ನ ಸಹೋದರಿಯ ಸಲಹೆಯಂತೆ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಈ ವಿವರ ಸೇರಿಸಲು ಅರ್ಜಿ ಸಲ್ಲಿಸಲು ಆತನ ಕುಟುಂಬ ಅರ್ಜಿ ಸಲ್ಲಿಸಿದೆ. ಇತ್ತೀಚೆಗಷ್ಟೇ ಈ ದಾಖಲೆಯನ್ನು ಪಟ್ಟಿ ಮಾಡುವುದಾಗಿ ಗಿನ್ನೆಸ್ ವಿಶ್ವದಾಖಲೆ ಸಂಸ್ಥೆಯಿಂದ ಕುಟುಂಬಕ್ಕೆ ವಿಷಯ ತಿಳಿದಿದೆ.
ಓಹಿಯೋದ ಕೊಲಂಬಸ್‌ನ 10 ವರ್ಷದ ಬಾಲಕ ಕರ್ಟಿಸ್ ಬ್ಯಾಡ್ಡಿ ಹೆಸರಿನ ಬಾಲಕ 2.4 ಸೆಂಮೀ ಉದ್ದದ ಹಲ್ಲು ಹೊಂದಿದ್ದು ಇದುವರೆಗಿನ ವಿಶ್ವದಾಖಲೆಯಾಗಿತ್ತು.