
ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು ಅಳವಡಿಸಿದ ಬಳಿಕ ಮೊದಲ ಬಾರಿಗೆ ತನ್ನ ತಾಯಿಯ ದನಿ ಕೇಳಲು ಸಾಧ್ಯವಾಗಿದೆ.
ತಾಯಿ ಲೌರಿನ್ ವೆಬ್ ತನ್ನ ಒಂದು ವರ್ಷದ ಮಗ ಮೇಯ್ಸನ್ ಮ್ಯಾಕ್‌ಮಿಲನ್‌ಗೆ ವರ್ಜೀನಿಯಾದ ರಿಚ್ಮಂಡ್‌ನಲ್ಲಿರುವ VCU ಮಕ್ಕಳ ಆಸ್ಪತ್ರೆಯು ಈ ರೀತಿಯ ವಿಶೇಷ ಶ್ರವಣ ಸಾಧನ ಧರಿಸಿರುವ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
“ಮೇಯ್ಸನ್, ಹಾಯ್, ನಿನಗೆ ನನ್ನ ದನಿ ಕೇಳಿಸುತ್ತಿದೆಯೇ? ಹಾಯ್ ಬೇಬಿ” ಎಂದು ತಾಯಿ ಕೇಳಿದಾಗ ಮಗುವಿನ ಮೊಗದಲ್ಲಿ ಮೂಡುವ ಮಂದಹಾಸವನ್ನು ನೋಡುವುದೇ ಒಂದು ಚಂದ.