alex Certify ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…?

ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು ಅಳವಡಿಸಿದ ಬಳಿಕ ಮೊದಲ ಬಾರಿಗೆ ತನ್ನ ತಾಯಿಯ ದನಿ ಕೇಳಲು ಸಾಧ್ಯವಾಗಿದೆ.

ತಾಯಿ ಲೌರಿನ್ ವೆಬ್‌ ತನ್ನ ಒಂದು ವರ್ಷದ ಮಗ ಮೇಯ್ಸನ್ ಮ್ಯಾಕ್‌ಮಿಲನ್‌ಗೆ ವರ್ಜೀನಿಯಾದ ರಿಚ್ಮಂಡ್‌ನಲ್ಲಿರುವ VCU ಮಕ್ಕಳ ಆಸ್ಪತ್ರೆಯು ಈ ರೀತಿಯ ವಿಶೇಷ ಶ್ರವಣ ಸಾಧನ ಧರಿಸಿರುವ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

“ಮೇಯ್ಸನ್, ಹಾಯ್‌, ನಿನಗೆ ನನ್ನ ದನಿ ಕೇಳಿಸುತ್ತಿದೆಯೇ? ಹಾಯ್‌ ಬೇಬಿ” ಎಂದು ತಾಯಿ ಕೇಳಿದಾಗ ಮಗುವಿನ ಮೊಗದಲ್ಲಿ ಮೂಡುವ ಮಂದಹಾಸವನ್ನು ನೋಡುವುದೇ ಒಂದು ಚಂದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...