ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ ವಿಭಾಗ.
ಹೌದು, ಮೆಥನಾಲ್ ಇಲ್ಲದ ಹ್ಯಾಂಡ್ ಸ್ಯಾನಿಟೈಸರ್ ಬಳಸಿದರೆ ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತಿದೆ. ಮೆಥನಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್‌ನಿಂದ ದೇಹಕ್ಕೆ ಹಾನಿಯಾಗಬಹುದಂತೆ. ಇದು ಚರ್ಮದ ಮೂಲಕ ದೇಹ ಸೇರಿದರೆ ವಿಷಕಾರಿಯಾಗಬಹುದು ಎಂದು ಎಫ್‌ಡಿಎ ಅಭಿಪ್ರಾಯ ಪಟ್ಟಿದೆ.
ಮೆಥನಾಲ್ ದೇಹಕ್ಕೆ ಸೇರಿದರೆ ಗಂಭೀರ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆಯಂತೆ. ಅಷ್ಟೆ ಯಾಕೆ ಅಂಧತ್ವ ಹಾಗೂ ಸಾವು ಕೂಡ ಸಂಭವಿಸಬಹುದು ಎಂದು ಎಫ್‌ಡಿಎ ತಿಳಿಸಿದೆ. ಹೀಗಾಗಿ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವ ಮುನ್ನ ಕೊಂಚ ಎಚ್ಚರದಿಂದಿರಿ.