
ಬ್ರಿಟನ್ನ ನದಿಯೊಂದರಲ್ಲಿ ಹಂಸದ ಮುಖಕ್ಕೆ ಕಪ್ಪು ಬಣ್ಣದ ಸಾಕ್ಸ್ ಹಾಕುವ ಮೂಲಕ ಹಿಂಸಿಸಲಾಗಿದೆ.
ಅದೃಷ್ಟವಶಾತ್ ಆ ಹಂಸವು ಉಸಿರುಗಟ್ಟಿ ಸಾಯುವ ಮುನ್ನ ಅದನ್ನ ರಕ್ಷಣೆ ಮಾಡಲಾಗಿದೆ.
ಈ ರೀತಿ ಚರಂಡಿಯಲ್ಲಿ ಮುಖಕ್ಕೆ ಸಾಕ್ಸ್ ಹಾಕಿಕೊಂಡು ಒದ್ದಾಡುತ್ತಿದ್ದ ಹಂಸವನ್ನ ಗಮನಿಸಿದ ದಾರಿಹೋಕರೊಬ್ಬರು ಹಂಸಗಳ ರಕ್ಷಣಾ ಆಸ್ಪತ್ರೆಗೆ ಮಾಹಿತಿ ನೀಡಿದ್ರು. ರಕ್ಷಣಾ ಕಾರ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಹಂಸವನ್ನ ರಕ್ಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಕ್ಸ್ ಹಂಸದ ಕುತ್ತಿಗೆಗೆ ಬಿಗಿಯಾಗಿದ್ದರಿಂದ ಅದು ಉಸಿರಾಡಲು ಸಮಸ್ಯೆ ಅನುಭವಿಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಸಂಬಂಧ ಇದೀಗ ಪ್ರಕರಣ ದಾಖಲಾಗಿದ್ದು ಈ ಕುಚೇಷ್ಟೆ ಮಾಡಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಯಾರಾದರೂ ಈ ಘಟನೆಗೆ ಸಾಕ್ಷಿಯಾದವರಿದ್ದಲ್ಲಿ ಪ್ರಕರಣ ಭೇದಿಸಲು ನೆರವಾಗಿ ಎಂದು ಮನವಿ ಮಾಡಿದ್ದಾರೆ.