alex Certify ಸೊಂಟ ನೋವು ಎಂದು ಬಂದವನನ್ನು ಪರೀಕ್ಷಿಸಿ ದಂಗಾದ ವೈದ್ಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಂಟ ನೋವು ಎಂದು ಬಂದವನನ್ನು ಪರೀಕ್ಷಿಸಿ ದಂಗಾದ ವೈದ್ಯರು…!

ಆತ ಅನೇಕ ದಿನಗಳಿಂದ ಸೊಂಟ ನೋವಿನಿಂದ ಬಳಲುತ್ತಿದ್ದ. ಎಷ್ಟೇ ಮಾತ್ರೆ ತೆಗೆದುಕೊಂಡರೂ ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಈ ವ್ಯಕ್ತಿಯ ನೋವು ಹಾಗೂ ನರಳಾಟ ನೋಡಿದ ವೈದ್ಯರು ಸ್ಕಾನ್ ಮಾಡಿದ್ದಾರೆ. ಸ್ಕಾನ್ ನಂತರ ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ಬ್ರೆಜಿಲ್‌ನಲ್ಲಿ. ಬ್ರೆಜಿಲ್‌ನ ಸೌ ಪಾಲೋದ ನಿವಾಸಿಯಾಗಿರುವ 34 ವರ್ಷದ ವ್ಯಕ್ತಿ ಸೊಂಟ ನೋವು ಎಂದು ಆಸ್ಪತ್ರೆಗೆ ಹೋದರೆ ವೈದ್ಯರೇ ಅಚ್ಚರಿ ಪಡುವಂತಾಗಿದೆ. ಈತನಿಗೆ ಎರಡು ಮೂತ್ರಪಿಂಡಗಳ ಬದಲಾಗಿ ಮೂರು ಮೂತ್ರ ಪಿಂಡಗಳು ಇರುವುದು ಬೆಳಕಿಗೆ ಬಂದಿದೆ.

ಎಲ್ಲರಿಗೂ ಸಾಮಾನ್ಯವಾಗಿ ಎರಡು ಮೂತ್ರ ಪಿಂಡಗಳಿರುತ್ತವೆ. ಆದರೆ ಈತನಿಗೆ ಮೂರು ಮೂತ್ರ ಪಿಂಡಗಳು ಇರುವುದು ಅಚ್ಚರಿಗೆ ಕಾರಣವಾಗಿದೆ. ಈ ರೀತಿಯ ಸಮಸ್ಯೆಗಳು ಭ್ರೂಣ ಬೆಳವಣಿಗೆ ಹಂತ ಅಥವಾ ಬೇರೆ ಚಿಕಿತ್ಸೆ ಪಡೆಯುವಾಗ ಇಂತಹ ಸಮಸ್ಯೆಗಳು ಬೆಳಕಿಗೆ ಬರುತ್ತವೆ ಎನ್ನಲಾಗಿದೆ. ಈ ರೀತಿಯ ಪ್ರಕರಣಗಳು ತೀರಾ ವಿರಳವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...