alex Certify ಸಾವಿಗೂ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಕೊರೊನಾ ಪೀಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿಗೂ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಕೊರೊನಾ ಪೀಡಿತ

ಕೊರೊನಾ ಸಾವಿನ ಸಂಖ್ಯೆ ಅಮೆರಿಕಾದಲ್ಲಿ ದುಪ್ಪಟ್ಟಾಗ್ತಿದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಪೀಡಿತ 30 ವರ್ಷದ ವ್ಯಕ್ತಿ ಸಾಯುವ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರ ಬರೆದಿದ್ದಾನೆ.

ಇಬ್ಬರು ಮಕ್ಕಳ ಜಾನ್ ಸ್ಥಳೀಯ ಕೋರ್ಟ್ ನಲ್ಲಿ ಕೆಲಸ ಮಾಡ್ತಿದ್ದನಂತೆ. ಆರಂಭದಲ್ಲಿ ಈತನಿಗೆ ಕೊರೊನಾ ಲಕ್ಷಣ ಕಾಣಿಸಿಕೊಳ್ಳಲಿಲ್ಲ. ನಂತ್ರ ಕೊರೊನಾ ಸೋಂಕಿಗೊಳಗಾಗಿದ್ದಾನೆ. 20 ದಿನಗಳಿಂದ ಆತನನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಪತ್ನಿ ಆಸ್ಪತ್ರೆ ತಲುಪುವ ಮೊದಲೇ ಜಾನ್ ಸಾವನ್ನಪ್ಪಿದ್ದಾನೆ. ಜಾನ್ ತನ್ನ ಮೊಬೈಲ್ ನೋಟ್ ನಲ್ಲಿ ಪತ್ನಿಗೆ ಪತ್ರ ಬರೆದಿದ್ದಾನೆ.

ನಾನು ನಿಮ್ಮೆಲ್ಲರನ್ನೂ ತುಂಬಾ ಪ್ರೀತಿಸುತ್ತೇನೆ. ನೀವು ನನಗೆ ಉತ್ತಮ ಜೀವನವನ್ನು ಕೊಟ್ಟಿದ್ದೀರಿ. ನಾನು ತುಂಬಾ ಅದೃಷ್ಟಶಾಲಿ. ನಾನು ನಿನ್ನ ಪತಿ ಹಾಗೂ ಬ್ರೆಡಿನ್-ಪೆನ್ನಿಯ ತಂದೆ ಎನ್ನಲು ಹೆಮ್ಮೆಪಡುತ್ತೇನೆ. ಕೇಟೀ, ನಾನು ಭೇಟಿಯಾದ ಎಲ್ಲ ಜನರಲ್ಲಿ ನೀನು ಅತ್ಯಂತ ಸುಂದರ ಮತ್ತು ಕಾಳಜಿಯುಳ್ಳ ವ್ಯಕ್ತಿ. ನೀನು ಮಕ್ಕಳನ್ನು ನೋಡಿಕೊಳ್ಳುವ ರೀತಿ ನನಗೆ ಇಷ್ಟ. ನನ್ನಿಬ್ಬರು ಮಕ್ಕಳಿಗೆ ನನ್ನ ಬಗ್ಗೆ ಹೇಳು. ನಿನಗೆ ಯಾರಾದರೂ ಸಿಕ್ಕಿದರೆ ಹಿಂದೆ ಸರಿಯಬೇಡ. ಅವರು ನಿನ್ನನ್ನು ಮತ್ತು ಮಕ್ಕಳನ್ನು ಪ್ರೀತಿಸುತ್ತಾರೆ. ಏನೇ ಇರಲಿ ಯಾವಾಗಲೂ ಸಂತೋಷವಾಗಿರಿ ಎಂದು ಪತ್ರ ಬರೆದಿದ್ದಾನೆ. ಆತ ಬರೆದ ಪತ್ರ ಈಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...