alex Certify ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ..?

ಕೊರೊನಾ ಎಫೆಕ್ಟ್ ನಿಂದಾಗಿ ಭಾರತದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಈಗಾಗಲೇ ಎಲ್ಲಾ ಸಂಚಾರ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಜೊತೆಗೆ ವಿಮಾನ ಹಾರಾಟವನ್ನೂ ಬಂದ್ ಮಾಡಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಬೇರೆ ದೇಶದಲ್ಲಿ ಕನ್ನಡಿಗರು ಸಿಲುಕಿದ್ದಾರೆ.

ನಮ್ಮನ್ನು ವಾಪಾಸ್ ಕರೆದುಕೊಂಡು ಹೋಗಿ ಅಂತ ಸರ್ಕಾರದ ಮುಂದೆ ಮನವಿ ಇಟ್ಟಿದ್ದರು. ಹೀಗಾಗಿ ಬೇರೆ ದೇಶಗಳಲ್ಲಿ ಉಳಿದಿರುವವರನ್ನು ಭಾರತಕ್ಕೆ ಕರೆತರಲಾಗುತ್ತಿದೆ.

ಇನ್ನು ವಿದೇಶದಲ್ಲಿರುವ ಭಾರತೀಯರ ಪೈಕಿ ಬೆಂಗಳೂರಿಗೆ ಹಲವಾರು ಮಂದಿ ವಾಪಸ್ಸಾಗಲಿದ್ದಾರೆ. ಇವರನ್ನು ಎರಡ್ಮೂರು ಹಂತದಲ್ಲಿ ಕರೆ ತರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ವಿದೇಶದಲ್ಲಿರುವ ಒಟ್ಟು 10,823 ಜನರನ್ನು ವಾಪಾಸ್ ಕರೆತರಲು ನಿರ್ಧಾರ ಮಾಡಲಾಗಿದೆ.

ಎರಡನೇ ಹಂತದಲ್ಲಿ 6,100 ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಇನ್ನೂ ಉಳಿದರೆ ಮೂರನೇ ಹಂತದಲ್ಲಿ ಕರೆತರಲು ತೀರ್ಮಾನ ಮಾಡಲಾಗಿದೆ.

ಇನ್ನು ಈಗಾಗಲೇ ವಿದೇಶದಲ್ಲಿರುವ ಕನ್ನಡಿಗರನ್ನು ಆರೋಗ್ಯ ತಪಾಸಣೆ ಮಾಡಿಯೇ ಬೆಂಗಳೂರಿಗೆ ಕರೆತರಲಾಗುತ್ತಿದೆ. ವಿದೇಶದಲ್ಲಿ ಅಂದರೆ ಕೆನಡದಿಂದ 328, ಅಮೆರಿಕದಿಂದ 927, ಯುಎಇಯಿಂದ 2,575, ಕತಾರ್ ದಿಂದ 414, ಸೌದಿ ಅರೇಬಿಯದಿಂದ 927 ಜನರನ್ನು ಬೆಂಗಳೂರಿಗೆ ವಾಪಾಸ್ ಕರೆತರಲಾಗುತ್ತಿದೆ. ಇನ್ನು ವಿದೇಶಗಳಿಂದ ಬಂದ ಕನ್ನಡಿಗರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...