ವಾಕ್ ಮಾಡಲು ಬೇಸರಿಸಿಕೊಳ್ಳುತ್ತೆ ಈ ಸೋಮಾರಿ ಶ್ವಾನ…! 01-05-2020 6:03PM IST / No Comments / Posted In: Latest News, International ನಾಯಿಗೆ ಕೆಲಸವಿಲ್ಲ. ಕೂರಲು ಪುರುಸೊತ್ತಿಲ್ಲ ಎಂಬ ಗಾದೆಯಿದೆ. ಸಾಮಾನ್ಯವಾಗಿ ನಾಯಿಗಳು ಒಂದು ಕಡೆ ಕೂರುವುದು ಕಡಿಮೆ. ಸದಾ ಅತ್ತಿಂದಿತ್ತ ಓಡಾಡಿ ಚಟುವಟಿಕೆಯಲ್ಲಿಯೇ ಇರುತ್ತವೆ. ಆದರೆ, ಇಲ್ಲೊಂದು ನಾಯಿಗೆ ಓಡಾಡಲೂ ಬೇಸರ. ಆಲಸಿ ನಾಯಿ ವಾಕಿಂಗ್ ಗೆ ಕರೆದೊಯ್ದರೂ ನಡೆಯದೇ ಮಲಗಿಬಿಡುತ್ತದೆ…! ಸೂಪರ್ ಮಾರ್ಕೆಟ್ ನಲ್ಲಿ ನಡೆಯದೇ ಮಲಗಿದ ಸ್ಪಾರ್ಕಿ ಎಂಬ ಐದು ವರ್ಷದ ನಾಯಿಯನ್ನು ಅದರ ಮಾಲೀಕ ಸಿಲ್ವಿಯೋ ಸ್ಯಾಮೊ ಬೆಲ್ಟ್ ಹಾಕಿ ಎಳೆದೊಯ್ಯುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಾಯಿ ಸದಾ ಕೂರುತ್ತಿರುವ, ಕಂಡ ಕಂಡಲ್ಲಿ ನಿದ್ರೆ ಮಾಡುವ ಫೋಟೋಗಳನ್ನು “ಸ್ಪಾರ್ಕಿ ಈಸ್ ಎ ಲೇಜಿ ಬಾಯ್ ” ಎಂಬ ಕ್ಯಾಪ್ಶನ್ ನೊಂದಿಗೆ ಹಂಚಿಕೊಂಡಿದ್ದಾರೆ. ಸ್ಯಾಮೊ 95 ಸಾವಿರ ಫಾಲೋವರ್ ಗಳನ್ನು ಹೊಂದಿದ್ದು, ವಿಡಿಯೋ, ಫೋಟೋಗಳು ಸಾಕಷ್ಟು ವೈರಲ್ ಆಗಿವೆ.