alex Certify ʼಲಾಕ್ ಡೌನ್ʼ ನಿಂದ ಹೆಚ್ಚಾಗ್ತಿದೆ ನಿಮಿರುವಿಕೆ ಸಮಸ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ಡೌನ್ʼ ನಿಂದ ಹೆಚ್ಚಾಗ್ತಿದೆ ನಿಮಿರುವಿಕೆ ಸಮಸ್ಯೆ…!

ಕೊರೊನಾ ವೈರಸ್‌ನಿಂದ ಜಾರಿಗೆ ಬಂದಿದ್ದ ಲಾಕ್ ‌ಡೌನ್ ಸಮಯದಲ್ಲಿ ಅನೇಕ ಜನರಲ್ಲಿ ನಿಮಿರುವಿಕೆ  ಗಣನೀಯವಾಗಿ ಹೆಚ್ಚಾಗಿದೆ.

ಸಂಶೋಧನೆಯೊಂದು ಇದನ್ನು ಪ್ರತಿಪಾದಿಸಿದೆ. ಲಾಕ್‌ ಡೌನ್ ‌ನಲ್ಲಿನ ಹೆಚ್ಚಿನ ಒತ್ತಡ ಮತ್ತು ಮದ್ಯದ ಕಾರಣದಿಂದಾಗಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸೂಪರ್ ಡ್ರಗ್ ಆನ್ ‌ಲೈನ್ ಡಾಕ್ಟರ್ ಪ್ರಕಾರ, ಕಳೆದ ತಿಂಗಳಲ್ಲಿ ನಿಮಿರುವಿಕೆ ಸಮಸ್ಯೆ ಹೋಗಲಾಡಿಸುವ ಔಷಧಿಗೆ ಬೇಡಿಕೆ ಶೇಕಡಾ 13 ರಷ್ಟು ಹೆಚ್ಚಾಗಿದೆ. ಲಾಕ್ ಡೌನ್ ನಲ್ಲಿ  ಬಂಧಿತರಾಗಿರುವ ಜನರಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಇದಲ್ಲದೆ ಗೂಗಲ್ ನಲ್ಲಿ  ಈ ಬಗ್ಗೆ ಅನೇಕರು ಸರ್ಚ್ ಮಾಡಿದ್ದಾರೆ. ಕಳೆದ 12 ತಿಂಗಳುಗಳಿಗೆ ಹೋಲಿಸಿದರೆ, ಈ ಸಮಸ್ಯೆ ಅತಿ ಹೆಚ್ಚು ಕಾಡಿದೆ. ಒತ್ತಡ, ಆಯಾಸ, ಚಡಪಡಿಕೆ, ಧೂಮಪಾನ ಮತ್ತು ಅತಿಯಾದ ಆಲ್ಕೊಹಾಲ್ ಇಂತಹ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಔಷಧಿಯಿದೆ. ಆದ್ರೆ ಔಷಧಿ ಪಡೆಯುವ ಮೊದಲು ಕಾರಣ ತಿಳಿದುಕೊಳ್ಳಬೇಕು. ಜೀವನಶೈಲಿ ಇದ್ರ ಮೇಲೆ ಪರಿಣಾಮ ಬೀರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...