alex Certify ಲಾಕ್ ಡೌನ್ ನಂತ್ರವೂ ಸ್ಥೂಲಕಾಯದ ಜನರಿಗೆ ಸಿಗಲಿದೆ ಈ ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಂತ್ರವೂ ಸ್ಥೂಲಕಾಯದ ಜನರಿಗೆ ಸಿಗಲಿದೆ ಈ ವಿನಾಯಿತಿ

ಲಾಕ್ ಡೌನ್ ನಂತ್ರವೂ ಬ್ರಿಟನ್ ನ ಸ್ಥೂಲಕಾಯದ ಜನರಿಗೆ ಮನೆಯಿಂದಲೇ ಕೆಲಸ ಮಾಡುವ ವಿನಾಯಿತಿ ಸಿಗಲಿದೆ. ಲಾಕ್‌ಡೌನ್ ವಿನಾಯಿತಿಗಾಗಿ ಸರ್ಕಾರದ ಹೊಸ ಕರಡು ಯೋಜನೆಯಲ್ಲಿ ಈ ಮಾಹಿತಿ ಸಿಕ್ಕಿದೆ. ಸ್ಥೂಲಕಾಯದ ಜನರಲ್ಲಿ ಸೋಂಕಿನ ಅಪಾಯ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ವರದಿ ಪ್ರಕಾರ ಸ್ಥೂಲಕಾಯದ ಜನರಿಗೆ ಸೋಂಕು ಬೇಗ ತಗಲುವ ಸಾಧ್ಯತೆಯಿದೆ. ಹಾಗೆ 70 ವರ್ಷ ಮೇಲ್ಪಟ್ಟವರು,‌ ಗರ್ಭಿಣಿಯರಿಗೆ ಸೋಂಕು ಬೇಗ ತಗಲುತ್ತದೆ. ಈ ಕಾರಣಕ್ಕೆ ಲಾಕ್ ಡೌನ್ ನಂತ್ರವೂ ಸರ್ಕಾರ ಇವರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಲಿದೆ.

ಎಲ್ಲ ಕಂಪನಿಗಳು ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕಿದೆ. ಬೊಜ್ಜು ಇಂಗ್ಲೆಂಡ್‌ನಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ. ಅಂಕಿಅಂಶದ ಪ್ರಕಾರ, ಪ್ರತಿ 10 ವಯಸ್ಕರಲ್ಲಿ 3 ಮಂದಿ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಸ್ಥೂಲಕಾಯದಿಂದ ಅನೇಕ ರೋಗಗಳು ಕಾಡ್ತಿವೆ. ಮಧುಮೇಹ ಸೇರಿದಂತೆ ಜನರು ಬೇಗ ಸೋಂಕಿಗೆ ಒಳಗಾಗ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...