ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ನ ಭಿನ್ನ ಪ್ರಕರಣ ವರದಿಯಾಗಿದೆ. ಒಟ್ಟಿಗೆ ಜನಿಸಿದ ತ್ರಿವಳಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯವೆಂದ್ರೆ ಈ ಮಕ್ಕಳ ಪೋಷಕರಿಗೆ ಕೊರೊನಾ ವೈರಸ್ ಇಲ್ಲ. ಈ ಪ್ರಕರಣವು ವೈದ್ಯರನ್ನು ಅಚ್ಚರಿಗೊಳಿಸಿದೆ.
ಆರೋಗ್ಯ ಅಧಿಕಾರಿಗಳು ಈ ಹಿಂದೆ ಅಂತಹ ಪ್ರಕರಣವನ್ನು ನೋಡಿಲ್ಲ ಎಂದಿದ್ದಾರೆ. ಈ ತ್ರಿವಳಿಗಳಲ್ಲಿ ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳು.
ಮಕ್ಕಳು ಜನಿಸಿದ ನಾಲ್ಕು ಗಂಟೆಗಳ ನಂತರ ಕೊರೊನಾ ಪರೀಕ್ಷೆಯನ್ನು ಸ್ಯಾನ್ ಲೂಯಿಸ್ ಪೊಟೊಸೆಯಲ್ಲಿ ಮಾಡಲಾಯಿತು. ಮಕ್ಕಳ ತಾಯಿಗೆ ಯಾವುದೇ ಕೊರೊನಾ ಲಕ್ಷಣವಿಲ್ಲ. ತ್ರಿವಳಿ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.