ಮಾಸ್ಕ್ ಧರಿಸದೆ ಮಾಲ್ ಪ್ರವೇಶಿಸಿದ ಭಾರತೀಯ ಮೂಲದ ಮಹಿಳೆಯೊಬ್ಬರು ಸಿಂಗಾಪುರದಲ್ಲಿ ಜೈಲು ಪಾಲಾಗಿದ್ದಾರೆ. 40 ವರ್ಷದ ಕಸ್ತೂರಿ ಗೋವಿಂದಸ್ವಾಮಿ ರತ್ನಸ್ವಾಮಿ ಜೈಲು ಸೇರಿದವರಾಗಿದ್ದಾರೆ.
ಈಕೆ ಮೇ 7ರಂದು ಮಾಸ್ಕ್ ಧರಿಸದೆ ಮಾಲ್ ಪ್ರವೇಶಿಸಿದ್ದು, ಇದಕ್ಕೆ ಆಕ್ಷೇಪಿಸಿದ ಮಾಲ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಬಳಿಕ ಪೊಲೀಸರು ಆಗಮಿಸಿದ್ದು, ಅವರ ಜೊತೆಗೂ ವಾಗ್ವಾದ ನಡೆಸಿದ್ದಾರೆ.
ಬಳಿಕ ಮಹಿಳೆಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೊದಲ ವಿಚಾರಣೆ ಬಳಿಕ ನ್ಯಾಯಾಲಯ ಅವರನ್ನು ಮಾನಸಿಕ ಆರೋಗ್ಯ ಸಂಸ್ಥೆ ರಿಮಾಂಡ್ ಗೆ ಕಳಿಸಿದೆ. ಮುಂದಿನ ವಿಚಾರಣೆ ಮೇ 22 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.