alex Certify ಭಾರತವನ್ನು ಇಲ್ಲಿಯವರೆಗೆ ಕಾಡಲಿದೆಯಂತೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತವನ್ನು ಇಲ್ಲಿಯವರೆಗೆ ಕಾಡಲಿದೆಯಂತೆ ಕೊರೊನಾ

ಕೊರೊನಾ ವೈರಸ್ ವಿಶ್ವದಾದ್ಯಂತ ಬಲಿ ಪಡೆಯುತ್ತಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಈ ಕೊರೊನಾದಿಂದ ಯಾವಾಗ ಮುಕ್ತಿ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಈ ಮಧ್ಯೆ ಸಿಂಗಾಪುರ ವಿಶ್ವವಿದ್ಯಾನಿಲಯ ಕೊರೊನಾ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.

ವಿಶ್ವದಾದ್ಯಂತ ಡಿಸೆಂಬರ್ 9ರವರೆಗೆ ಕೊರೊನಾ ಸೋಂಕು ಸಂಪೂರ್ಣ ತೊಲಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಭಾರತದಲ್ಲಿ ಜುಲೈ 26ರವರೆಗೆ ಸೋಂಕು ಸಂಪೂರ್ಣ ಕಡಿಮೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸಿಂಗಾಪುರ ಟೆಕ್ನಾಲಜಿ ಆಂಡ್ ಡಿಸೈನ್ ವಿಶ್ವವಿದ್ಯಾಲಯದ ಸಂಶೋಧಕರು ಕೃತಕ ಬುದ್ಧಿಮತ್ತೆ ಚಾಲಿತ ದತ್ತಾಂಶದ ವಿಶ್ಲೇಷಣೆ ಮೂಲಕ  ಈ ವಿಷ್ಯ ತಿಳಿಸಿದ್ದಾರೆ.

ಅಧ್ಯಯನದ ಪ್ರಕಾರ, ವಿಶ್ವದ ಎಲ್ಲಾ ದೇಶಗಳು ಡಿಸೆಂಬರ್ ಆರಂಭದ ವೇಳೆಗೆ ಕೊರೊನಾದಿಂದ ಮುಕ್ತಿ ಪಡೆಯಲಿವೆ. ಕೊರೊನಾ ಯುಎಸ್ ನಲ್ಲಿ ಆಗಸ್ಟ್ 27, ಸ್ಪೇನ್ ನಲ್ಲಿ ಆಗಸ್ಟ್ 7, ಇಟಲಿಯಲ್ಲಿ ಆಗಸ್ಟ್ 25 ಮತ್ತು ಭಾರತದಲ್ಲಿ ಜುಲೈ 26 ರೊಳಗೆ ಕೊನೆಗೊಳ್ಳುತ್ತದೆ ಎಂದು ಅಧ್ಯಯನ ಹೇಳುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...