alex Certify ಭಾರತಕ್ಕೆ ಮರಳಿದ್ದ H-1B ವೀಸಾದಾರರಿಗೆ ಎದುರಾಗಿದೆ ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಮರಳಿದ್ದ H-1B ವೀಸಾದಾರರಿಗೆ ಎದುರಾಗಿದೆ ಸಂಕಷ್ಟ

ಮಾರಣಾಂತಿಕ ಕರೋನಾ ವೈರಸ್ ಈಗ ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿಯ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ.

ಕರೋನಾ ವೈರಸ್ ನಿಂದಾಗಿ ಜೀವ ಹಾನಿಯ ಜೊತೆಗೆ ವಿಶ್ವದ ಆರ್ಥಿಕ ಪರಿಸ್ಥಿತಿಯ ಮೇಲೂ ದುಷ್ಪರಿಣಾಮ ಬೀರಿದ್ದು, ಆರ್ಥಿಕ ಪರಿಸ್ಥಿತಿ ಸರಿದೂಗಿಸುವ ಸಲುವಾಗಿ ಉದ್ಯೋಗ ಕಡಿತಗೊಳಿಸುವ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ.

ಇದರ ಮಧ್ಯೆ ಲಾಕ್ಡೌನ್ ಗಿಂತ ಮುಂಚಿತವಾಗಿ ಅಮೆರಿಕಾದಿಂದ ಭಾರತಕ್ಕೆ ಮರಳಿದ್ದ H-1B ವೀಸಾ ಹೊಂದಿದ್ದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಉಳಿಯಬೇಕೆಂದರೆ ಅಮೆರಿಕಾಕ್ಕೆ ವಾಪಸ್ ತೆರಳಬೇಕಾದ ಅನಿವಾರ್ಯತೆ ಇವರುಗಳಿಗಿದ್ದು, ವಿಮಾನ ಸಂಚಾರವಿಲ್ಲದ ಕಾರಣ ದಿಕ್ಕು ತೋಚದಂತಾಗಿದ್ದಾರೆ.

ಒಂದಷ್ಟು ಜನ ಸೇರಿ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದು ತೆರಳಲು ಕೆಲವರು ಚಿಂತನೆ ನಡೆಸಿದ್ದರಾದರೂ ಒಂದು ವಿಮಾನದಲ್ಲಿ ಶೇಕಡಾ 50 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿರುವ ಕಾರಣ ಪ್ರಯಾಣ ವೆಚ್ಚ ಒಬ್ಬರಿಗೆ 7 ಲಕ್ಷ ರೂಪಾಯಿ ತಗುಲಲಿದೆ ಎನ್ನಲಾಗಿದೆ. ಹೀಗಾಗಿ ಅಯೋಮಯ ಸ್ಥಿತಿಯಲ್ಲಿ ಈ ವೀಸಾದಾರರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...