alex Certify ಬೆರಗಾಗಿಸುತ್ತೆ ಪುಟ್ಟ ಪೋರಿಯರ ಸಾಹಸ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಪುಟ್ಟ ಪೋರಿಯರ ಸಾಹಸ ಪ್ರದರ್ಶನ

ಕೊರೊನಾ ವೈರಸ್ ಕಾರಣಕ್ಕೆ ಸಾರ್ವಜನಿಕರು ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಹಳಷ್ಟು ಕಂಪನಿಗಳ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬೇಸತ್ತವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ.

ಅಂತಹ ವಿಡಿಯೋ ಒಂದು ಇಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾಲ್ವರು  ಪುಟ್ಟ ಬಾಲಕಿಯರು ಅದ್ಭುತ ಸಾಹಸ ಪ್ರದರ್ಶನ ನೀಡಿದ್ದು, ನೋಡುಗರನ್ನು ಬೆರಗಾಗಿಸುವಂತೆ ಮಾಡಿದೆ. ಅಪಾಯವನ್ನು ಲೆಕ್ಕಿಸದೆ ಈ ಪುಟ್ಟ ಪೋರಿಯರು ಅಂತಹ ಸಾಹಸ ಮಾಡಿದ್ದಾರೆ.

ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಈ ಬಾಲೆಯರು ಒಬ್ಬರ ಮೇಲೊಬ್ಬರು ಹತ್ತಿಕೊಂಡು ಅದ್ಭುತ ಸಾಧನೆ ಮಾಡಿದ್ದಾರೆ. ಮತ್ತೊಂದು ಪ್ರದರ್ಶನದಲ್ಲಿ ಬಾಲೆಯೊಬ್ಬಳು ಸ್ಟೀಲ್ ಡಬ್ಬಿಯನ್ನು ಹಾಕಿಕೊಂಡು ಅದರೊಳಗೆ ಕುಳಿತವಳ ಮೇಲೆ ಮತ್ತೊಬ್ಬಳು ಬಾಲೆ ಹತ್ತಿರುವ ದೃಶ್ಯ ಕಂಡು ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ನೀವೂ ನೋಡಿ ಈ ಸಾಹಸವನ್ನು ಕಣ್ತುಂಬಿಕೊಳ್ಳಿ.

Waooo! What an Amazing Performance!!!??

Waooo! What an Amazing Performance!!!??

Posted by Social9 on Thursday, June 18, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...