alex Certify ಬೆಚ್ಚಿಬೀಳಿಸುವಂತಿದೆ ಕೊರೊನಾ ಕುರಿತ ಅಮೆರಿಕಾ ತಜ್ಞರ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಕೊರೊನಾ ಕುರಿತ ಅಮೆರಿಕಾ ತಜ್ಞರ ವರದಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ಕಂಗಾಲಾಗುವಂತೆ ಮಾಡಿದೆ. ಎಲ್ಲಾ ಕ್ರಮಗಳನ್ನು ಕೈಗೊಂಡರೂ ಇದು ನಿಯಂತ್ರಣಕ್ಕೆ ಬಾರದೆ ದಿನೇ ದಿನೇ ಹೆಚ್ಚಾಗತೊಡಗಿದೆ.

ಆದರೆ ಆರ್ಥಿಕತೆಯನ್ನು ಕಾಪಾಡುವ ಅನಿವಾರ್ಯತೆಯಲ್ಲಿರುವ ಸರ್ಕಾರಗಳು, ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡುತ್ತಿದ್ದು, ಇದು ಸೋಂಕು ಹೆಚ್ಚಳಗೊಳ್ಳುವಂತೆ ಮಾಡುತ್ತಿದೆ.

ಇದರ ಮಧ್ಯೆ ಅಮೆರಿಕಾದ ತಜ್ಞರು ಬೆಚ್ಚಿಬೀಳಿಸುವ ಸಂಗತಿಯೊಂದನ್ನು ಬಹಿರಂಗಪಡಿಸಿದ್ದು, ಕೊರೊನಾ ಮಹಾಮಾರಿ ಇನ್ನೂ ಎರಡು ವರ್ಷಗಳ ಕಾಲ ವಿಶ್ವವನ್ನು ಕಾಡಲಿದೆ ಎಂದು ಹೇಳಿದ್ದಾರೆ.

ಅಲ್ಲದೇ ಮುಂದಿನ ದಿನಗಳಲ್ಲಿ ಕೊರೊನಾ ಇನ್ನಷ್ಟು ಅಬ್ಬರಿಸಲಿದೆ ಎಂದು ತಿಳಿಸಿದ್ದು, ಹೀಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವೆಂಬಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ, ಆರ್ಥಿಕತೆಯನ್ನು ಕಾಪಾಡುವ ಸಲುವಾಗಿ ಲಾಕ್ಡೌನ್ ತೆರೆಯಬೇಕಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕೊರೊನಾ ಮಹಾಮಾರಿಯ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದು ಯಾವ ಹಂತ ತಲುಪುತ್ತದೆಂಬುದನ್ನು ಕಾದುನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...