alex Certify ಬೆಚ್ಚಿಬೀಳಿಸುತ್ತೆ ಲಾಕ್ ‌ಡೌನ್ ನಿಯಮ ಮೀರಿದವರಿಗೆ ನೀಡುವ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಲಾಕ್ ‌ಡೌನ್ ನಿಯಮ ಮೀರಿದವರಿಗೆ ನೀಡುವ ಶಿಕ್ಷೆ

ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಯಾಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಲಾಕ್‌ಡೌನ್ ಇರುವುದರಿಂದ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಹೇಳಿದರೂ ಜನ ಮಾತ್ರ ತಮಗೂ ಕೊರೊನಾಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಪೊಲೀಸರು ಎಷ್ಟೇ ಹೇಳಿದರೂ ಜನ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ನಮ್ಮ ದೇಶದಲ್ಲಿ ನಾವೆಲ್ಲಾ ನೋಡಿದ, ನೋಡುತ್ತಿರುವ ಪ್ರತಿ ನಿತ್ಯದ ದೃಶ್ಯಾವಳಿಗಳು.

ಆದರೆ ಸೌದಿ ಅರೇಬಿಯಾದಲ್ಲಿ ಲಾಕ್‌ಡೌನ್ ಸಮಯದಲ್ಲಿ ಯಾರಾದರೂ ಹೊರ ಬಂದರೆ ಅವರಿಗೆ ಎಂದೆಂದೂ ಕಾಣದ ಶಿಕ್ಷೆ ವಿಧಿಸಲಾಗುತ್ತದೆಯಂತೆ. ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಹೊರ ಬಂದರೆ, ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡಿದರೆ 1000 ಸೌದಿ ರಿಯಾಲ್‌ದಿಂದ ಒಂದು ಲಕ್ಷ ರಿಯಾಲ್‌ವರೆಗೆ ದಂಡ ತೆರಬೇಕಾಗುತ್ತದೆ. ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕು. ಒಂದು ಸಾವಿರ ಸೌದಿ ರಿಯಾಲ್‌ನ ಭಾರತೀಯ ರುಪಾಯಿಯಲ್ಲಿ ನೋಡುವುದಾದರೆ 20 ಲಕ್ಷ ರೂಪಾಯಿಯಾಗುತ್ತದೆ.

ಇನ್ನು ಉದ್ದೇಶಪೂರ್ವಕವಾಗಿ ಒಬ್ಬರಿಂದ ಒಬ್ಬರಿಗೆ ರೋಗ ಹರಡಿಸಿದರೆ ಐದು ಲಕ್ಷ ರಿಯಾಲ್ ಹಾಗು ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರೆ10 ಲಕ್ಷ ರಿಯಾಲ್ ವರೆಗೆ ನೀಡಬೇಕು ಹಾಗೂ ಜೈಲು ಶಿಕ್ಷೆ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...