alex Certify ಬಿಗ್ ಬ್ರೇಕಿಂಗ್: ಚೀನಾದ ವುಹಾನ್ ನಗರದಲ್ಲಿ ಶಾಲೆ ಆರಂಭ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ಬ್ರೇಕಿಂಗ್: ಚೀನಾದ ವುಹಾನ್ ನಗರದಲ್ಲಿ ಶಾಲೆ ಆರಂಭ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿಯ ಉಗಮಸ್ಥಾನ ಚೀನಾದ ವುಹಾನ್ ನಗರದಲ್ಲಿ ಪರಿಸ್ಥಿತಿ ಸುಧಾರಿಸಿದಂತೆ ಕಂಡು ಬರುತ್ತಿದೆ.

ಅಲ್ಲಿ ಈಗಾಗಲೇ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದು, ಕೊರೊನಾ ಸೋಂಕಿನ ಪ್ರಕರಣಗಳು ಸಹ ಗಣನೀಯವಾಗಿ ಇಳಿಮುಖವಾಗಿದೆ.

ಈ ಹಿನ್ನೆಲೆಯಲ್ಲಿ ವುಹಾನ್ ನಗರದಲ್ಲಿ ಮಂಗಳವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು, 1.4 ಮಿಲಿಯನ್ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳಿಗೆ ಹಾಜರಾಗಲಿದ್ದಾರೆ. ವುಹಾನ್ ನಗರದಲ್ಲಿ ಒಟ್ಟು 2,842 ಶಿಕ್ಷಣ ಸಂಸ್ಥೆಗಳಿದ್ದು ಇವುಗಳ ಆರಂಭಕ್ಕೆ ಸ್ಥಳೀಯಾಡಳಿತ ಹಸಿರು ನಿಶಾನೆ ತೋರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...