alex Certify ಬಿಗ್‌ ನ್ಯೂಸ್: ಕೊರೊನಾ ವೈರಸ್ ಆತಂಕದಲ್ಲಿದ್ದವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಕೊರೊನಾ ವೈರಸ್ ಆತಂಕದಲ್ಲಿದ್ದವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ನಿಂದ ಮುಕ್ತಿ ಪಡೆದು ಆಸ್ಪತ್ರೆಯಿಂದ ಮನೆಗೆ ಬಂದವರಿಗೂ ಮತ್ತೆ ಕೊರೊನಾ ಕಾಣಿಸಿಕೊಂಡ ಸುದ್ದಿ ಕೇಳಿ ಬರ್ತಿದೆ. ಇದು ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸಿತ್ತು. ಆದ್ರೆ ವಿಜ್ಞಾನಿಗಳು ಈ ಬಗ್ಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದ್ದಾರೆ.

ವಿಜ್ಞಾನಿಗಳ ಪ್ರಕಾರ ಒಮ್ಮೆ ಗುಣಮುಖರಾದವರಿಗೆ ಎರಡನೇ ಬಾರಿ ಕೊರೊನಾ ಕಾಣಿಸಿಕೊಳ್ಳುವ ಅಪಾಯ ಕಡಿಮೆ. ಒಂದು ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಅವು ಸಾಂಕ್ರಾಮಿಕವಲ್ಲ. ಅವ್ರನ್ನು ಸ್ಪರ್ಶಿಸಿದ ವ್ಯಕ್ತಿಗೆ ಕೊರೊನಾ ಕಾಣಿಸುವುದಿಲ್ಲ.

ಚೇತರಿಸಿಕೊಂಡ ನಂತರ ಮತ್ತೆ ಧನಾತ್ಮಕ ಫಲಿತಾಂಶ ಬಂದ 285 ರೋಗಿಗಳ ಮೇಲೆ ವಿಜ್ಞಾನಿಗಳು ಈ ಅಧ್ಯಯನವನ್ನು ಮಾಡಿದ್ದಾರೆ. ಈ ರೋಗಿಗಳು ಇತರರಿಗೆ ಯಾವುದೇ ರೀತಿಯ ಸೋಂಕನ್ನು ಹರಡಲಿಲ್ಲ. ಹಾಗೆ ಬ್ಯಾಕ್ಟೀರಿಯಾದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಅಧ್ಯಯನವು ಕಂಡುಹಿಡಿದಿದೆ. ಈ ರೋಗಿಗಳು ಸಾಂಕ್ರಾಮಿಕವಲ್ಲದವರು ಅಥವಾ ಸತ್ತ ವೈರಸ್ ಕಣಗಳು ಅವರೊಳಗೆ ಇರುತ್ತವೆ. ಫಲಿತಾಂಶ ಧನಾತ್ಮಕವಾಗಿ ಕಂಡು ಬಂದ್ರೂ ಅವ್ರು ಅನಾರೋಗ್ಯಕ್ಕೆ ತುತ್ತಾಗುವುದಿಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...