alex Certify ಬಿಗ್‌ ನ್ಯೂಸ್: ಕೊರೊನಾ ಕುರಿತು ಆಘಾತಕಾರಿ ವಿಷಯ ತಿಳಿಸಿದ ವಿಶ್ವ ಆರೋಗ್ಯ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಕೊರೊನಾ ಕುರಿತು ಆಘಾತಕಾರಿ ವಿಷಯ ತಿಳಿಸಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ಸೋಂಕು ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಯಾವಾಗಪ್ಪ ಇದರಿಂದ ನಾವು ಮುಕ್ತ ಆಗೋದು ಎನ್ನುವ ಪ್ರಶ್ನೆ ನಮಗೆ ನಾವೇ ಕೇಳಿಕೊಳ್ಳುತ್ತಿದ್ದೇವೆ‌. ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ‌. ಇದಕ್ಕೆ ಲಸಿಕೆ ಯಾವಾಗ ಕಂಡು ಹಿಡಿಯುತ್ತಾರೋ ಎಂದು ಜನ ಕಾಯುತ್ತಿದ್ದಾರೆ. ಆದರೆ ಕೊರೊನಾ ಸೋ‌ಕಿಗೆ ಲಸಿಕೆಯೇ ಇರದ ರೋಗವಾಗಿ ಉಳಿದು ಬಿಡುತ್ತಾ ಎನ್ನುವ ಅನುಮಾನ ಕಾಡತೊಡಗಿದೆ.

ಹೌದು, ಕೊರೊನಾಗೆ ಲಸಿಕೆಯೇ ಸಿಗದೆ ಹೋದರು ಹೋಗಬಹುದು ಎಂದು WHO ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಈ ಮಾತು ನಿಜಕ್ಕೂ ಆಘಾತಕಾರಿಯಾಗಿದೆ. ಇದೊಂದು ಲಸಿಕೆಯೇ ಇಲ್ಲದ ರೋಗವಾಗಿ ಉಳಿದು ಬಿಡಬಹುದು. ಹೆಚ್ ಐ ವಿ ಗೆ ಲಸಿಕೆಯನ್ನು ಇನ್ನು ಕಂಡು ಹಿಡಿಯಲು ಆಗಿಲ್ಲ. ಅದೇ ರೀತಿ ಇದಕ್ಕೂ ಲಸಿಕೆಯೇ ಇಲ್ಲದೆ ಉಳಿಯಬಹುದು. ಇದಕ್ಕೆ ಲಸಿಕೆ ಕಂಡು ಹಿಡಿಯಲು ಎಷ್ಟು ವರ್ಷಗಳಾಗುತ್ತೋ ಗೊತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಜೆ ರಯಾನ್ ಹೇಳಿದ್ದಾರೆ.

ಇನ್ನು ಲಾಕ್ ಡೌನ್ ಬಗ್ಗೆಯೂ ಮಾತನಾಡಿರುವ ಅವರು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂತಹ ಸಮಯದಲ್ಲಿ ಲಾಕ್ ಡೌನ್ ವಿನಾಯ್ತಿ ಅಥವಾ ಸಡಿಲಿಕೆ ಮಾಡುವುದು ಸರಿಯಲ್ಲ. ಲಾಕ್ ಡೌನ್ ಅನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದಿದ್ದಾರೆ‌. ಇವರ ಮಾತನ್ನು ಕೇಳಿದರೆ ಮೇ 17 ರ ನಂತರ ಲಾಕ್ ಡೌನ್ ಇನ್ನಷ್ಟು ಬಿಗಿಯಾಗುತ್ತೆ ಎಂಬ ಸುಳಿವು ಸಿಕ್ಕಿದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...