alex Certify ತನ್ನ ಸೆಲ್ಫಿ ಫೋಟೋದಲ್ಲಿನ ವಿಚಿತ್ರ ನೋಡಿ ಬೆಚ್ಚಿ ಬಿದ್ದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಸೆಲ್ಫಿ ಫೋಟೋದಲ್ಲಿನ ವಿಚಿತ್ರ ನೋಡಿ ಬೆಚ್ಚಿ ಬಿದ್ದ ಮಹಿಳೆ…!

ಇತ್ತೀಚಿನ ದಿನಗಳಲ್ಲಂತೂ ಸೆಲ್ಫಿ ಕ್ರೇಜ್ ಅನ್ನೋದು ಎಲ್ಲರಲ್ಲೂ ಇದೆ. ಮನೆಯಲ್ಲಿರುವ ಮಹಿಳೆಯರೂ ಇದರಿಂದ ಹೊರತಾಗಿಲ್ಲ. ತಾವು ಕೊಂಡ ಹೊಸ ವಸ್ತುಗಳನ್ನು ಹಾಕಿಕೊಂಡು ಸೆಲ್ಫಿ ತೆಗೆದುಕೊಳ್ಳುವವರೇ ಹೆಚ್ಚು. ಲಂಡನ್‌ನಲ್ಲೂ ಮಹಿಳೆಯೊಬ್ಬರು ಸನ್‌ಗ್ಲಾಸ್ ಕೊಂಡುಕೊಂಡಿದ್ದಾರೆ. ಈ ಗ್ಲಾಸ್ ಹಾಕಿಕೊಂಡು ಸೆಲ್ಫಿಯನ್ನೂ ತೆಗೆದುಕೊಂಡಿದ್ದಾರೆ.

ಸೆಲ್ಫಿ ತೆಗೆದ ನಂತರ ಆ ಫೋಟೋವನ್ನು ತನ್ನ ಬಾಯ್‌ಫ್ರೆಂಡ್‌ಗೆ ಸೆಂಡ್ ಮಾಡಿದ್ದಾರೆ. ನಂತರ ತಾನು ತೆಗೆದುಕೊಂಡ ಫೋಟೋವನ್ನು ವೀಕ್ಷಣೆ ಮಾಡುವಾಗ ಆಕೆಗೆ ವಿಚಿತ್ರ ಆಕೃತಿಗಳು ಗೋಚರಿಸಿವೆ. ತಾನು ತೆಗೆದುಕೊಂಡ ಫೋಟೋದಲ್ಲಿ ಏನೋ ಆತ್ಮ ಇದ್ದ ಹಾಗೆ ಕಾಣುತ್ತಿದೆ ಎಂಬುದನ್ನು ಆಕೆ ತಿಳಿದಿದ್ದಾಳೆ.

ಆ ಮಹಿಳೆ ತಾನು ಕಂಡಿದ್ದು ಆತ್ಮದ ಚಿತ್ರವೋ ಅಥವಾ ನನ್ನ ಭ್ರಮೆಯೋ ಎಂಬುದನ್ನು ತಿಳಿದುಕೊಳ್ಳಲು ಆ ಫೋಟೋವನ್ನು ಕೋರಾ ಎಂಬ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾಳೆ. ಅಷ್ಟೆ ಅಲ್ಲ ಆ ಫೋಟೋದ ಬಗ್ಗೆ ಕಮೆಂಟ್ ಮಾಡುವಂತೆ ಹೇಳಿದ್ದಾಳೆ. ಕೆಲವರು ಇವಳು ಅಂದುಕೊಂಡಂತೆಯೇ ವಿಚಿತ್ರ ಆಕೃತಿಗಳು ಆ ಫೋಟೋದಲ್ಲಿ ಇರೋದನ್ನು ಗಮನಿಸಿದ್ದಾರೆ. ಮತ್ತೊಂದಿಷ್ಟು ಜನ ಬೆಳಕು ಇರಬಹುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...