ಇತ್ತೀಚಿನ ದಿನಗಳಲ್ಲಂತೂ ಸೆಲ್ಫಿ ಕ್ರೇಜ್ ಅನ್ನೋದು ಎಲ್ಲರಲ್ಲೂ ಇದೆ. ಮನೆಯಲ್ಲಿರುವ ಮಹಿಳೆಯರೂ ಇದರಿಂದ ಹೊರತಾಗಿಲ್ಲ. ತಾವು ಕೊಂಡ ಹೊಸ ವಸ್ತುಗಳನ್ನು ಹಾಕಿಕೊಂಡು ಸೆಲ್ಫಿ ತೆಗೆದುಕೊಳ್ಳುವವರೇ ಹೆಚ್ಚು. ಲಂಡನ್‌ನಲ್ಲೂ ಮಹಿಳೆಯೊಬ್ಬರು ಸನ್‌ಗ್ಲಾಸ್ ಕೊಂಡುಕೊಂಡಿದ್ದಾರೆ. ಈ ಗ್ಲಾಸ್ ಹಾಕಿಕೊಂಡು ಸೆಲ್ಫಿಯನ್ನೂ ತೆಗೆದುಕೊಂಡಿದ್ದಾರೆ.
ಸೆಲ್ಫಿ ತೆಗೆದ ನಂತರ ಆ ಫೋಟೋವನ್ನು ತನ್ನ ಬಾಯ್‌ಫ್ರೆಂಡ್‌ಗೆ ಸೆಂಡ್ ಮಾಡಿದ್ದಾರೆ. ನಂತರ ತಾನು ತೆಗೆದುಕೊಂಡ ಫೋಟೋವನ್ನು ವೀಕ್ಷಣೆ ಮಾಡುವಾಗ ಆಕೆಗೆ ವಿಚಿತ್ರ ಆಕೃತಿಗಳು ಗೋಚರಿಸಿವೆ. ತಾನು ತೆಗೆದುಕೊಂಡ ಫೋಟೋದಲ್ಲಿ ಏನೋ ಆತ್ಮ ಇದ್ದ ಹಾಗೆ ಕಾಣುತ್ತಿದೆ ಎಂಬುದನ್ನು ಆಕೆ ತಿಳಿದಿದ್ದಾಳೆ.
ಆ ಮಹಿಳೆ ತಾನು ಕಂಡಿದ್ದು ಆತ್ಮದ ಚಿತ್ರವೋ ಅಥವಾ ನನ್ನ ಭ್ರಮೆಯೋ ಎಂಬುದನ್ನು ತಿಳಿದುಕೊಳ್ಳಲು ಆ ಫೋಟೋವನ್ನು ಕೋರಾ ಎಂಬ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾಳೆ. ಅಷ್ಟೆ ಅಲ್ಲ ಆ ಫೋಟೋದ ಬಗ್ಗೆ ಕಮೆಂಟ್ ಮಾಡುವಂತೆ ಹೇಳಿದ್ದಾಳೆ. ಕೆಲವರು ಇವಳು ಅಂದುಕೊಂಡಂತೆಯೇ ವಿಚಿತ್ರ ಆಕೃತಿಗಳು ಆ ಫೋಟೋದಲ್ಲಿ ಇರೋದನ್ನು ಗಮನಿಸಿದ್ದಾರೆ. ಮತ್ತೊಂದಿಷ್ಟು ಜನ ಬೆಳಕು ಇರಬಹುದು ಎಂದು ಹೇಳಿದ್ದಾರೆ.