
ಹೌದು, ನಿತ್ಯಾನಂದನ ‘ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್’ ಗಣೇಶ ಹಬ್ಬದ ದಿನವಾದ ಆಗಸ್ಟ್ 22ರಂದು ಸ್ಥಾಪನೆಯಾಗಲಿದ್ದು, ಇದರ ಜೊತೆಗೆ ಪ್ರತ್ಯೇಕ ಅರ್ಥ ವ್ಯವಸ್ಥೆ ಸೃಷ್ಟಿಸಿಕೊಳ್ಳಲು ಮುಂದಾಗಿರುವ ಸ್ವಾಮಿ ನಿತ್ಯಾನಂದ, ತನ್ನದೇ ಭಾವಚಿತ್ರವಿರುವ ಕರೆನ್ಸಿ ಬಿಡುಗಡೆ ಮಾಡಿರುವ ಕುರಿತು ಘೋಷಣೆ ಮಾಡಿದ್ದಾನೆ.
ನಿತ್ಯಾನಂದ ಸ್ಥಾಪಿಸಿರುವ ಬ್ಯಾಂಕ್ ಆಫ್ ಕೈಲಾಶ್, ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದ್ದು, ಸ್ವಾಮಿ ನಿತ್ಯಾನಂದನೇ ಸ್ವತಃ ವಿಡಿಯೋ ಸಂದೇಶದಲ್ಲಿ ಈ ವಿಚಾರವನ್ನು ತಿಳಿಸಿದ್ದಾನೆ. ನಿತ್ಯಾನಂದ ಬಿಡುಗಡೆಗೊಳಿಸಿರುವ 100 ಮುಖ ಬೆಲೆಯ ನೋಟು ಅಮೆರಿಕನ್ ಡಾಲರ್ ರೀತಿಯಲ್ಲಿರುವುದು ವಿಶೇಷ.