alex Certify ಕೊರೊನಾ ಸಂಕಷ್ಟದ ನಡುವೆಯೇ ವಕ್ಕರಿಸಿದೆ ಮತ್ತೊಂದು ಕಾಯಿಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆಯೇ ವಕ್ಕರಿಸಿದೆ ಮತ್ತೊಂದು ಕಾಯಿಲೆ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ವಿಶ್ವದಾದ್ಯಂತ ಮೂರು ಲಕ್ಷ ಮಂದಿ ಸಾವಿಗೀಡಾಗಿದ್ದು, 40 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ.

ಕೊರೊನಾಗೆ ಲಸಿಕೆ ಕಂಡು ಹಿಡಿಯುವ ತೀವ್ರ ಪ್ರಯತ್ನ ನಡೆದಿದ್ದು, ಆದರೆ ಈವರೆಗೂ ಇದರಲ್ಲಿ ಯಶಸ್ಸು ದೊರಕಿಲ್ಲ. ಇದರ ಮಧ್ಯೆ ಬ್ರಿಟನ್ ಮತ್ತು ಅಮೆರಿಕಾದ ನೂರಾರು ಮಕ್ಕಳಲ್ಲಿ ಹೊಸ ಬಗೆಯ ಆರೋಗ್ಯ ಸಮಸ್ಯೆ ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.

ಇದು ಬಾಲ್ಯದಲ್ಲಿ ಕಾಡುವ ಕವಾಸಾಕಿ ಕಾಯಿಲೆಯನ್ನು ಹೋಲುತ್ತಿದೆ ಎಂದು ಹೇಳಲಾಗಿದ್ದು, ಕೊರಾನಗೂ ಇದಕ್ಕೂ ಸಂಬಂಧವಿದೆ ಎಂದು ತಜ್ಞರು ಹೇಳಿದ್ದಾರೆ. ಈ ಕಾಯಿಲೆ ಕಾಣಿಸಿಕೊಳ್ಳುವ ಮಕ್ಕಳಲ್ಲಿ ತೀವ್ರ ಜ್ವರ, ಊತ, ಕಣ್ಣು ಕೆಂಪಾಗುವಿಕೆ ಮತ್ತು ಮೈಕೈ ನೋವು ಮುಂತಾದ ಲಕ್ಷಣಗಳು ಕಂಡು ಬರುತ್ತಿದ್ದು, ಇದೀಗ ಕಾಯಿಲೆ ಪೀಡಿತ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...