alex Certify ಕೊರೊನಾ ಮಾನವ ಸೃಷ್ಟಿಯೇ..? ಇಲ್ಲಿದೆ ಅದಕ್ಕೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಾನವ ಸೃಷ್ಟಿಯೇ..? ಇಲ್ಲಿದೆ ಅದಕ್ಕೆ ಉತ್ತರ

ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕೋಟ್ಯಾಂತರ ಮಂದಿಯ ಜೀವ – ಜೀವನ ಬಲಿ ಪಡೆಯುತ್ತಿರುವ ಕೊರೊನಾಗೆ ಚೀನಿಯರೇ ಕಾರಣ ಎಂಬುದು ಗೊತ್ತಿರುವ ಸಂಗತಿ. ಈ ಕೊರೊನಾ ವೈರಾಣು ನೈಸರ್ಗಿಕ ಸೃಷ್ಟಿಯಲ್ಲ ಎಂಬ ಮಾತುಗಳು ಈ ವೈರಸ್ ಸೃಷ್ಟಿಯಾದಾಗಿನಿಂದಲೂ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಮತ್ತೊಂದು ಹೇಳಿಕೆ ಹೊರ ಬಿದ್ದಿದೆ.

ಹೌದು, ಕೊರೊನಾ ವೈರಾಣು ವುಹಾನ್‌ನ ಸರ್ಕಾರಿ ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಿದ್ದಂತೆ. ಹೀಗಂತ ಚೀನಾದ ವೈರಾಲಜಿಸ್ಟ್ ಆಗಿರುವ ಡಾ. ಲೀ ಮೆಂಗ್ ಯಾನ್ ಹೇಳಿದ್ದಾರೆ ಎನ್ನಲಾಗಿದೆ. ಇವರು ಹೇಳಿರುವ ಪ್ರಕಾರ ಇದು ಪ್ರಯೋಗಾಲಯದಲ್ಲಿ ನಿರ್ಮಿಸಿದ ವೈರಾಣು. ಆ ಲ್ಯಾಬ್‌ನಲ್ಲೇ ಸೃಷ್ಟಿಸಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇವೆ ಎಂದು ಅವರು ಹೇಳಿದ್ದಾರೆ.

ಚೀನಾದಲ್ಲಿ ಕಮ್ಯುನಿಷ್ಟ್ ಪಕ್ಷ ಇರೋದ್ರಿಂದ ಇಂತಹ ಅನೇಕ ವಿಚಾರಗಳನ್ನು ಅವರು ಮುಚ್ಚಿ ಹಾಕಿದ್ದಾರೆ. ನಾನು ಈ ವಿಚಾರಗಳನ್ನು ಬಹಿರಂಗಪಡಿಸೋದಕ್ಕೆ ಮುಂದಾದಾಗಲೂ ನನ್ನ ಬಾಯಿ ಮುಚ್ಚಿಸಿದರು. ಇದೊಂದು ಕೆಟ್ಟ ಹಾಗೂ ತುಂಬಾ ಅಪಾಯಕಾರಿ ವೈರಾಣು ಎಂತಲೂ ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...