alex Certify ಅಮೆರಿಕಾದಲ್ಲಿ ಮತ್ತೊಬ್ಬ ಕನ್ನಡತಿ ವೈದ್ಯೆಗೆ ವಿಶಿಷ್ಟ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದಲ್ಲಿ ಮತ್ತೊಬ್ಬ ಕನ್ನಡತಿ ವೈದ್ಯೆಗೆ ವಿಶಿಷ್ಟ ಗೌರವ

ಇಡೀ ವಿಶ್ವವೇ ಕರೋನಾ ಮಹಾಮಾರಿಯ ವಿರುದ್ಧ ಸೆಣಸಾಡುತ್ತಿರುವ ನಡುವೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರೂ ಸಹ ಈ ಸೋಂಕಿನಿಂದ ಜನರನ್ನು ರಕ್ಷಿಸಲು ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೀಗಾಗಿ ಇಂತಹ ವೈದ್ಯರುಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅಲ್ಲಿನ ಸಾರ್ವಜನಿಕರು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸುತ್ತಿದ್ದಾರೆ. ಈ ಮೊದಲು ಅಮೆರಿಕದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್ ಅವರಿಗೆ ಈ ಗೌರವ ಸಲ್ಲಿಸಲಾಗಿತ್ತು.

ಇದೀಗ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಬನಶಂಕರಿಯ ಕದಿರೇನಹಳ್ಳಿ ಕ್ರಾಸ್ ನಿವಾಸಿ ಡಾ. ಯಾಸ್ಮಿನ್ ಸುಲ್ತಾನ ಅವರಿಗೆ ಈ ವಿಶಿಷ್ಟ ಗೌರವ ಸಲ್ಲಿಸಲಾಗಿದೆ. ತಮ್ಮ ಕಾರುಗಳಲ್ಲಿ ಹಾರನ್ ಮಾಡುತ್ತಾ ಬಂದ ನಾಗರೀಕರು ‘ಥ್ಯಾಂಕ್ಯೂ’ ಎಂಬ ಫಲಕದ ಮೂಲಕ ವೈದ್ಯೆ ಮನೆಯ ಎದುರಿನ ರಸ್ತೆಯಲ್ಲಿ ನಿಧಾನವಾಗಿ ಸಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ವೈದ್ಯೆ ಯಾಸ್ಮಿನ್ ಕೈಮುಗಿದು ಧನ್ಯವಾದ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...