alex Certify ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ

 2020! एक ऐसा साल, जिसके जल्द से जल्द खत्म होने की दुआ कौन नहीं मांग रहा? एक के बाद एक संकटों की खबरों के बीच, क्या कुछ अच्छा भी है, जो इस साल से हाथ लगेगा? कुदरत का खेल यही है कि सिक्के के दो पहलू होते हैं. कुछ खराब है तो कुछ अच्छा पक्ष भी होगा ही. तो क्या आपको पता चला कि कोरोना वायरस क्या खुशखबरी दे रहा है?

2020ನ್ನು ಅತ್ಯಂತ ಕೆಟ್ಟ ವರ್ಷವೆಂದೇ ಪರಿಗಣಿಸಲಾಗಿದೆ. 2020 ಮುಗಿದ್ರೆ ಸಾಕು ಎನ್ನುವವರಿದ್ದಾರೆ. ಈ ವರ್ಷ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿ ಕುಂಟಿತಗೊಂಡಿದೆ. ಈ ಎಲ್ಲದರ ಮಧ್ಯೆಯೇ ಕೆಲವೊಂದು ಒಳ್ಳೆ ಕೆಲಸಗಳು ಕೊರೊನಾ ಸಂದರ್ಭದಲ್ಲಿ ನಡೆದಿವೆ.

ಕೊರೊನಾ, ಲಾಕ್ ಡೌನ್ ಕಾರಣಕ್ಕೆ ಪಾರ್ಟಿ, ಮೋಜು-ಮಸ್ತಿ ಕಡಿಮೆಯಾಗಿದೆ. ಕಾರ್ಖಾನೆಯಲ್ಲಿ ತಂಬಾಕು ಉತ್ಪಾದನೆ ಕೂಡ ಕಡಿಮೆಯಾಗಿದೆ. ಹಾಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ಧೂಮಪಾನ ತ್ಯಜಿಸುತ್ತಿದ್ದಾರೆ. ಇದು ವಿಶ್ವದಾದ್ಯಂತ ಆಗ್ತಿರುವ ಒಳ್ಳೆ ಬೆಳವಣಿಗೆ. ವರದಿ ಪ್ರಕಾರ, ಫ್ರಾನ್ಸ್ ಮತ್ತು ಬ್ರಿಟನ್‌ ನಲ್ಲಿ ಧೂಮಪಾನಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

2019 ರಲ್ಲಿ ಶೇಕಡಾ 16.2ರಷ್ಟು ಜನರು ಧೂಮಪಾನ ತ್ಯಜಿಸಲು ಬಯಸಿದ್ದರಂತೆ. 2020 ರಲ್ಲಿ ಈವರೆಗೆ ಶೇಕಡಾ 23.2 ರಷ್ಟು ಜನರು ಧೂಮಪಾನವನ್ನು ತ್ಯಜಿಸುವ ಉದ್ದೇಶವನ್ನು ಹೊಂದಿದ್ದಾರೆ. 2008ರಿಂದ ಈ ರೀತಿ ಸರ್ವೆ ಮಾಡಲಾಗ್ತಿದೆ. ಆದ್ರೆ ಈ ವರ್ಷವೇ ಅತಿ ಹೆಚ್ಚು ಮಂದಿ ಧೂಮಪಾನ ತ್ಯಜಿಸುವ ಮನಸ್ಸು ಮಾಡ್ತಿದ್ದಾರೆ.

ಬ್ರಿಟನ್‌ನಲ್ಲಿ ಸುಮಾರು 10 ಲಕ್ಷ ಜನರು ಧೂಮಪಾನವನ್ನು ತ್ಯಜಿಸಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. ಲಾಕ್‌ಡೌನ್‌ನಿಂದಾಗಿ ಜನರ ಜೀವನ ಶೈಲಿ ಬದಲಾಗಿದೆ. ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...