alex Certify BIG NEWS: ರಷ್ಯಾ – ಉಕ್ರೇನ್ ಯುದ್ದದ ಎಫೆಕ್ಟ್; 2014 ರ ಬಳಿಕ ಮೊದಲ ಬಾರಿಗೆ $100 ಮುಟ್ಟಿದ ಬ್ಯಾರಲ್‌ ತೈಲದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾ – ಉಕ್ರೇನ್ ಯುದ್ದದ ಎಫೆಕ್ಟ್; 2014 ರ ಬಳಿಕ ಮೊದಲ ಬಾರಿಗೆ $100 ಮುಟ್ಟಿದ ಬ್ಯಾರಲ್‌ ತೈಲದ ಬೆಲೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆ ಕಂಡಿದೆ. ಒಂದು ಬ್ಯಾರೆಲ್ ತೈಲದ ಬೆಲೆ $100 (7,525.55ರೂ.)ಗೆ ಜಿಗಿದಿದೆ. 2014ರಿಂದ ಮೊದಲ ಬಾರಿಗೆ ತೈಲ ಬೆಲೆ $100 ಗಡಿ ಮುಟ್ಟಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆದೇಶದ ನಂತರ, ರಷ್ಯಾವು ಉಕ್ರೇನ್‌ಗೆ ಪಡೆಗಳನ್ನು ಸ್ಥಳಾಂತರಿಸಿದೆ. ಈ ಎರಡು ದೇಶಗಳ ಬಿಕ್ಕಟ್ಟಿನ ನಂತರ ಈ ಬೆಲೆ ಹೆಚ್ಚಳ ಕಂಡುಬಂದಿದೆ.‌ ರಷ್ಯಾ-ಉಕ್ರೇನ್ ಯುದ್ಧದಿಂದ, ಯುರೋಪ್‌ನಲ್ಲಿನ ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯಾಗಬಹುದು ಎಂದು ಕಳವಳ ಸೃಷ್ಟಿಯಾಗಿದೆ.

ಈಗಾಗಲೇ ಉಕ್ರೇನ್ ಸಹ ಯುದ್ಧಕ್ಕೆ ಸಂಪೂರ್ಣ ತಯಾರಾಗಿದೆ ಎಂದು ವರದಿಯಾಗಿದೆ.‌ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದೆ ಮತ್ತು ಶಸ್ತ್ರಾಸ್ತ್ರಗಳ ದಾಳಿಯೊಂದಿಗೆ ನಗರಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.‌

BIG BREAKING: ರಷ್ಯಾದ ಯುದ್ದ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್‌

ಇನ್ನು ಸಾಮಾನ್ಯವಾಗಿ ತಿಳಿದಿರುವಂತೆ, ರಷ್ಯಾವು ಪ್ರಪಂಚದ ಎರಡನೇ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಇದು ಮುಖ್ಯವಾಗಿ ಯುರೋಪಿಯನ್ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲವನ್ನು ಮಾರಾಟ ಮಾಡುತ್ತದೆ. ಜೊತೆಗೆ ಯುರೋಪ್‌ಗೆ ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರ ಕೂಡ ರಷ್ಯಾ.‌ ಯೂರೋಪ್ ದೇಶಗಳ ಪೂರೈಕೆಯ ಸುಮಾರು 35% ಅನ್ನು ರಷ್ಯಾ ಒದಗಿಸುತ್ತಿದ್ದು, ಯುದ್ಧದಿಂದ ಯುರೋಪ್ ಭಾಗದಲ್ಲಿ ತೈಲ ಬಿಕ್ಕಟ್ಟು ಉಂಟಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಇನ್ನು ಮಾಧ್ಯಮಗಳ ವರದಿ ಪ್ರಕಾರ ತೈಲ ಬೆಲೆ ಕೆಲವು ವಾರಗಳಲ್ಲೆ $75 ರಿಂದ $100 ಕ್ಕೆ ತಲುಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...