alex Certify BIG NEWS: ಪಠ್ಯದಲ್ಲಿ ಚುನಾವಣಾ ಸಾಕ್ಷರತೆ ಸೇರ್ಪಡೆ: ವಿವಿಗಳಿಗೆ ಯುಜಿಸಿ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಠ್ಯದಲ್ಲಿ ಚುನಾವಣಾ ಸಾಕ್ಷರತೆ ಸೇರ್ಪಡೆ: ವಿವಿಗಳಿಗೆ ಯುಜಿಸಿ ಸೂಚನೆ

ನವದೆಹಲಿ: ಕಾಲೇಜು ವಿದ್ಯಾರ್ಥಿಗಳ ಪಠ್ಯದಲ್ಲಿ ಚುನಾವಣಾ ಸಾಕ್ಷರತೆ ಸೇರ್ಪಡೆಗೊಳಿಸಬೇಕು. ಈ ಮೂಲಕ ಯುವ ಮತದಾರರರಲ್ಲಿ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಯುಜಿಸಿ ಸೂಚನೆ ನೀಡಿದೆ.

ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಅಣಕು ಮತದಾನ ಶಿಬಿರಗಳನ್ನು ಆಯೋಜಿಸಬೇಕು. ಯುವಕರಿಗೆ ಮತದಾನದ ಸಂಕಲ್ಪ ಬೋಧನೆ ಮಾಡಬೇಕು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ ಸೂಚನೆ ನೀಡಲಾಗಿದೆ.

ಈ ಕುರಿತಾಗಿ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು, ಕಾಲೇಜುಗಳ ಪ್ರಾಂಶುಪಾಲರಿಗೆ ಯುಜಿಸಿಯಿಂದ ಪತ್ರ ಬರೆಯಲಾಗಿದೆ. ಪಠ್ಯದಲ್ಲಿ ಅಧಿಕೃತವಾಗಿ ಚುನಾವಣಾ ಸಾಕ್ಷರತೆಯನ್ನು ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಭಾರತ ಚುನಾವಣಾ ಆಯೋಗದ ನಡುವೆ ನವೆಂಬರ್ 2 ರಂದು ಒಪ್ಪಂದ ಏರ್ಪಟ್ಟಿದೆ ಎಂದು ಹೇಳಲಾಗಿದೆ.

ದೇಶಾದ್ಯಂತ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ತಮ್ಮ ಪಠ್ಯಕ್ರಮದಲ್ಲಿ ಮತದಾರರ ಶಿಕ್ಷಣ ಮತ್ತು ಚುನಾವಣಾ ಸಾಕ್ಷರತೆಯನ್ನು ಸಂಯೋಜಿಸಲು ಭಾರತೀಯ ಚುನಾವಣಾ ಆಯೋಗದ(ಇಸಿಐ) ಮಹತ್ವಾಕಾಂಕ್ಷೆಯ ಗುರಿಯನ್ನು ಪೂರೈಸಲು ದೃಢವಾದ ಕಾರ್ಯವಿಧಾನವನ್ನು ರೂಪಿಸಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(UGC) ತಿಳಿಸಿದೆ.

ಔಪಚಾರಿಕವಾಗಿ ವಿಶ್ವವಿದ್ಯಾನಿಲಯ/ಮತ್ತು ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ಭವಿಷ್ಯದ ಮತ್ತು ಹೊಸ ಮತದಾರರನ್ನು SVEEP ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚಿನ ಚುನಾವಣಾ ಭಾಗವಹಿಸುವಿಕೆಗಾಗಿ ಸಿದ್ಧಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...