ಮದುವೆ ಮನೆಗೆ ವಧು-ವರರು ಡಿಫರೆಂಟ್ ರೀತಿಯಲ್ಲಿ ಎಂಟ್ರಿ ಕೊಡುವ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವಧು ಲಗ್ಗೇಜ್ ಟ್ರಾಲಿಯಲ್ಲಿ ತನ್ನ ಮದುವೆಯ ಸ್ಥಳಕ್ಕೆ ತಲುಪಿದ್ದಾಳೆ !
ಪ್ರಿಯಾಂಕಾ ಇಂಡೋರಿಯಾ ಎಂಬ ವಧುವಿನ ಸಹೋದರರು ಆಕೆ ಆ ಹೈ ಹೀಲ್ಸ್ ಮತ್ತು ಭಾರವಾದ ಲೆಹೆಂಗಾದಲ್ಲಿ ನಡೆಯಲು ಬಯಸಲಿಲ್ಲ. ಆದ್ದರಿಂದ, ಅವರು ಟ್ರಾಲಿಯಲ್ಲಿ ಆಕೆಯನ್ನು ಕರೆತಂದಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋವನ್ನು ಇದಾಗಲೇ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ವಧು ಮದುಮಗಳ ದಿರಿಸಿನಲ್ಲಿ ಲಗೇಜ್ ಟ್ರಾಲಿಯಲ್ಲಿ ನಿಂತಿರುವುದನ್ನು ಕಾಣಬಹುದು. ಆಕೆಯ ಸಹೋದರರು ಟ್ರಾಲಿಯನ್ನು ಮದುವೆ ಸ್ಥಳಕ್ಕೆ ತಳ್ಳಿಕೊಂಡು ಬಂದಿದ್ದಾರೆ. ಇದನ್ನು ಪ್ರಿಯಾಂಕಾ ಶೇರ್ ಮಾಡಿಕೊಂಡಿದ್ದು, ಕಾರಣವನ್ನೂ ಹೇಳಿದ್ದಾರೆ.
“ನನ್ನ ಸಹೋದರರು ಆ ಹೈ ಹೀಲ್ಸ್ನಲ್ಲಿ ನನ್ನನ್ನು ಆಯಾಸಗೊಳಿಸಲು ಬಯಸಲಿಲ್ಲ. ಅದ್ದರಿಂದ ಟ್ರಾಲಿಯಲ್ಲಿ ಕರೆದುಕೊಂಡು ಬಂದರು ಎಂದಿದ್ದಾಳೆ”. ತಂಗಿಯ ಮೇಲೆ ಅಣ್ಣದ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ.