ಪಾಯಸ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಇಲ್ಲಿ ಕೆಲವೇ ಕೆಲವು ಸಾಮಾಗ್ರಿಗಳನ್ನು ಬಳಸಿಕೊಂಡು ರುಚಿಕರವಾದ ರವೆ ಪಾಯಸವನ್ನು ಥಟ್ಟಂತ ಮಾಡಬಹುದು ನೋಡಿ.
ಬೇಕಾಗುವ ಸಾಮಗ್ರಿಗಳು:
¼ ಕಪ್ – ರವೆ, ½ ಕಪ್ – ಸಕ್ಕರೆ, 2 ಕಪ್ – ನೀರು, 1 ½ ಕಪ್ – ಹಾಲು, 6 – ಗೋಡಂಬಿ ಚೂರು, 10 – ದ್ರಾಕ್ಷಿ, 1 ಟೇಬಲ್ ಸ್ಪೂನ್ – ತುಪ್ಪ, ಚಿಟಿಕೆ – ಉಪ್ಪು, ಚಿಟಿಕೆ – ಏಲಕ್ಕಿ ಪುಡಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಗೋಡಂಬಿ, ದ್ರಾಕ್ಷಿ ಸೇರಿಸಿ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಇದಕ್ಕೆ ರವೆ ಹಾಕಿ ಪರಿಮಳ ಬರುವವರಗೆ ಹುರಿದುಕೊಂಡು ಗ್ಯಾಸ್ ಆಫ್ ಮಾಡಿ.
ಗ್ಯಾಸ್ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು ಅದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ ಕುದಿ ಬರುತ್ತಿದ್ದಂತೆ ಹುರಿದುಕೊಂಡು ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಲು ಇಡಿ.
ರವೆ ಬೆಂದ ಮೇಲೆ ಸಕ್ಕರೆ ಸೇರಿಸಿ. ಇದು ಕರಗುತ್ತಿದ್ದಂತೆ ಹಾಲು ಸೇರಿಸಿ ಕುದಿಸಿ. ನಂತರ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.