alex Certify BIG NEWS: ನಕಲಿ ಖಾತೆಗಳ ಪತ್ತೆಗಾಗಿ ಬಳಕೆದಾರರ ಸೆಲ್ಫಿ ವಿಡಿಯೋ ಪಡೆಯಲು ಮುಂದಾದ ಇನ್​ಸ್ಟಾಗ್ರಾಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕಲಿ ಖಾತೆಗಳ ಪತ್ತೆಗಾಗಿ ಬಳಕೆದಾರರ ಸೆಲ್ಫಿ ವಿಡಿಯೋ ಪಡೆಯಲು ಮುಂದಾದ ಇನ್​ಸ್ಟಾಗ್ರಾಂ…!

ಮೆಟಾ ಕಂಪನಿ ಮಾಲೀಕತ್ವದ ಅಪ್ಲಿಕೇಶನ್,​​ ಇನ್​ಸ್ಟಾಗ್ರಾಂನಲ್ಲಿ ಭದ್ರತೆ ದೃಷ್ಟಿಯಿಂದ ಹೊಸದೊಂದು ಬದಲಾವಣೆಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಬಳಕೆದಾರರಿಗೆ ಅವರ ಖಾತೆಯನ್ನು ವೆರಿಫೈ ಮಾಡಲು ಮುಖದ ವಿವಿಧ ಭಂಗಿಗಳನ್ನು ತೋರಿಸುವ ವಿಡಿಯೋ ಸೆಲ್ಫಿಯನ್ನು ಒದಗಿಸುವಂತೆ ಕೇಳಿದೆ.

ಎಕ್ಸ್​ಡಿಎ ಡೆವಲಪರ್ಸ್ ನೀಡಿರುವ ಮಾಹಿತಿಯ ಪ್ರಕಾರ ಅನೇಕ ಇನ್​ಸ್ಟಾಗ್ರಾಂ ಬಳಕೆದಾರರಿಗೆ ಈಗ ಇರುವ ಖಾತೆಗಳನ್ನು ಪರಿಶೀಲಿಸುವ ಸಲುವಾಗಿ ವಿಡಿಯೋ ಸೆಲ್ಫಿಯನ್ನು ನೀಡುವಂತೆ ಇನ್​ಸ್ಟಾಗ್ರಾಂ ಕೇಳಿದೆ ಎನ್ನಲಾಗಿದೆ. ಕಂಪನಿಯು ಕಳೆದ ವರ್ಷವೇ ಈ ವೈಶಿಷ್ಟ್ಯದ ಪರಿಶೀಲನೆಗೆ ಮುಂದಾಗಿತ್ತು ಆದರೆ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು

ಇದೀಗ ಮೆಟಾ ಕೂಡ ಈ ವೈಶಿಷ್ಟ್ಯವನ್ನು ಬಳಸಿಕೊಂಡು ಇನ್​ಸ್ಟಾಗ್ರಾಂನಲ್ಲಿರುವ ನಕಲಿ ಖಾತೆಗಳನ್ನು ಡಿಲಿಟ್ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಒಮ್ಮೆ ವಿಡಿಯೋ ಸಂಪೂರ್ಣವಾಗಿ ರೆಕಾರ್ಡ್ ಆದ ಬಳಿಕ ಬಳಕೆದಾರರು ಖಾತೆ ದೃಢೀಕರಣಕ್ಕಾಗಿ ಈ ವಿಡಿಯೋವನ್ನು ಸಬ್​ಮಿಟ್​ ಮಾಡಬೇಕು. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ನಿಮಗೆ ಎಲ್ಲಿಯೂ ಕಾಣಸಿಗೋದಿಲ್ಲ. 30 ದಿನಗಳ ಅಂತರದಲ್ಲಿ ಸರ್ವರ್​ನಲ್ಲಿ ಈ ವಿಡಿಯೋ ಡಿಲೀಟ್​ ಕೂಡ ಆಗಲಿದೆ.

ಈ ನಡುವೆ ಇನ್​ಸ್ಟಾಗ್ರಾಂ ಟೇಕ್​ ಎ ಬ್ರೇಕ್​ ಎಂಬ ಹೊಸ ವೈಶಿಷ್ಟ್ಯವನ್ನೂ ಪರಿಶೀಲಿಸುತ್ತಿದೆ. ಈ ವೈಶಿಷ್ಟ್ಯದ ಮೂಲಕ ಅಪ್ಲಿಕೇಶನ್​​ನಿಂದ ನಿಯಮಿತ ವಿರಾಮವನ್ನು ಪಡೆಯಬಹುದಾಗಿದೆ.

ಈ ವಿಚಾರವಾಗಿ ಮಾತನಾಡಿದ ಇನ್​​ಸ್ಟಾಗ್ರಾಂ ಮುಖ್ಯಸ್ಥ ಅದಾಂ ಮೊಸ್ಸೆರಿ, ಇನ್​ಸ್ಟಾಗ್ರಾಂನಲ್ಲಿ ಬಹುಬೇಡಿಕೆಯ ಟೇಕ್​ ಎ ಬ್ರೇಕ್​ ವೈಶಿಷ್ಟ್ಯವು ನಿಮಗೆ ಹೆಚ್ಚು ಕಾಲ ಇನ್​ಸ್ಟಾದಲ್ಲಿ ಸಮಯ ಕಳೆದುದ್ದನ್ನು ಜ್ಞಾಪಿಸುತ್ತದೆ. ಈ ಆಯ್ಕೆಯು ಡಿಸೆಂಬರ್​ ತಿಂಗಳಲ್ಲಿ ಲಭ್ಯವಿರುವ ಸಾಧ್ಯತೆ ಎಂದು ಅಂದಾಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...