alex Certify BIG NEWS: ಆನ್ಲೈನ್ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾದ ಇನ್‌ಸ್ಟಾಗ್ರಾಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆನ್ಲೈನ್ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾದ ಇನ್‌ಸ್ಟಾಗ್ರಾಂ

ಕಾಮೆಂಟ್ ಸೆಕ್ಷನ್‌ಗಳಲ್ಲಿ ಅಸಭ್ಯವಾದ ಪ್ರತಿಕ್ರಿಯೆಗಳಿಂದ ಬಳಕೆದಾರರನ್ನು ರಕ್ಷಿಸಲು ಒಂದಷ್ಟು ಹೊಸ ಫೀಚರ್‌ಗಳನ್ನು ಇನ್‌ಸ್ಟಾಗ್ರಾಂ ಪರಿಚಯಿಸಿದೆ. ಈ ಫೀಚರ್‌ಗಳು ಸೆಲೆಬ್ರಿಟಿಗಳು ಹಾಗೂ ಹೈ-ಪ್ರೊಫೈಲ್ ಕ್ರಿಯೇಟರ್‌ಗಳಿಗೆ ಇನ್ನಷ್ಟು ಅನುಕೂಲವಾಗಲಿವೆ.

ಕಾಮೆಂಟ್‌ಗಳು ಹಾಗೂ ನೇರ ಸಂದೇಶದ ಮನವಿಗಳ ಮೇಲೆ ಮಿತಿ ಹೇರಲು ಈ ಫೀಚರ್‌ಗಳು ಅನುವಾಗಲಿದ್ದು, ಅಸಭ್ಯ ಕಾಮೆಂಟ್‌ಗಳು/ಕಿರಿಕಿರಿ ಮೆಸೇಜ್‌ಗಳಿಗೆ ಕಡಿವಾಣ ಹಾಕಲು ನೆರವಾಗಲಿದೆ ಎನ್ನಲಾಗಿದೆ.

BIG NEWS: ಡೆಲ್ಟಾ ಪ್ಲಸ್ ಗೆ ಮೊದಲ ಬಲಿ; ಕ್ಷಣ ಕ್ಷಣಕ್ಕೂ ಹೆಚ್ಚಿದ ಮೂರನೇ ಅಲೆ ಆತಂಕ

ಫೇಸ್ಬುಕ್ ಮಾಲೀಕತ್ವದ ಫೋಟೋ ಶೇರಿಂಗ್ ಅಪ್ಲಿಕೇಶನ್‌ನಲ್ಲಿ ಈ ಫೀಚರ್‌ಗಳನ್ನು ಆನ್ ಮಾಡಿದ ಮೇಲೆ ಪೋಸ್ಟ್ ಮಾಡಿದ ಬಳಕೆದಾರರನ್ನು ಫಾಲೋ ಮಾಡದ ಮಂದಿ ಮಾಡುವ ಕಾಮೆಂಟ್‌ಗಳು ಹಾಗು ಡಿಎಂ ಮನವಿಗಳು ಹೈಡ್ ಆಗಲಿವೆ.

ತೀರಾ ಅಸಭ್ಯ ಕಾಮೆಂಟ್‌ಗಳು ಹಾಗೂ ಡಿಎಂಗಳನ್ನು ವಿಪರೀತ ಮಾಡುವ ಬಳಕೆದಾರರಿಗೆ ವಾರ್ನಿಂಗ್ ಕೊಡುವ ಈ ಫೀಚರ್‌, ತನ್ನ ಸಾಮುದಾಯಿಕ ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...