alex Certify ಸಸ್ಯಾಹಾರಿ ಪುರುಷರ ಬಗ್ಗೆ ಅವಹೇಳನಾಕಾರಿ ಮಾತು; ಟೀಕೆಗೆ ಗ್ರಾಸವಾದ ಇನ್‌ಫ್ಲುಯೆನ್ಸರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಸ್ಯಾಹಾರಿ ಪುರುಷರ ಬಗ್ಗೆ ಅವಹೇಳನಾಕಾರಿ ಮಾತು; ಟೀಕೆಗೆ ಗ್ರಾಸವಾದ ಇನ್‌ಫ್ಲುಯೆನ್ಸರ್‌

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಲಿಕ್ಸ್‌ ಹಾಗೂ ಲೈಕ್‌ಗಳು ಬರಲೆಂದು ಕಂಟೆಂಟ್ ಸೃಷ್ಟಿಕರ್ತರು ಕೆಲವೊಮ್ಮೆ ತೀರಾ ಸೂಕ್ಷ್ಮವಾದ ವಿಚಾರಗಳಲ್ಲೂ ವಿವೇಚನೆ ಇಲ್ಲದೇ ಮಾತನಾಡಿ ವಿವಾದಕ್ಕೆ ಸಿಲುಕಿ ಬಿಡುತ್ತಾರೆ.

ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಒಬ್ಬರನ್ನು ಒಳಗೊಂಡ ಇತ್ತೀಚಿನ ಘಟನೆಯೊಂದರಲ್ಲಿ, ಸಸ್ಯಾಹಾರಿ ಪುರುಷರನ್ನು ಅಣಕ ಮಾಡುವ ಸ್ಕಿಟ್ ತಯಾರಿಸಿದ ಯುವತಿಯೊಬ್ಬರು ಸಸ್ಯಾಹಾರಿ ಪುರುಷರನ್ನು ಡೇಟ್ ಮಾಡಲು ತಮಗೆ ಅಸಹ್ಯವೆನಿಸುತ್ತದೆ, ಅದರಲ್ಲೂ ಜೈನ್ ಸಮುದಾಯದವರು, ಎನ್ನುವ ಮೂಲಕ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ.

“ಸಸ್ಯಾಹಾರಿ ಪ್ರಿಯ ಸಿಂಗಲ್ ಪುರುಷರನ್ನು ಟ್ಯಾಗ್ ಮಾಡಿ ಅವರ ಸಮಸ್ಯೆ ಏನೆಂದು ಕೇಳಿ,” ಎಂದು ಕ್ಯಾಪ್ಷನ್ ಕೊಟ್ಟು ಹಾಕಿರುವ ಈ ವಿಡಿಯೋದಲ್ಲಿ ಸ್ವಯಂ ನಿಯಂತ್ರಣ ಕಳೆದುಕೊಂಡ ಯುವತಿ, ಸೂಕ್ಷ್ಮ ಸಂವೇದನೆ ಮರೆತು ನೈತಿಕತೆಗಳನ್ನು ಬದಿಗೊತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ಗಳಲ್ಲಿ ಕೆಂಡ ಕಾರಿದ್ದಾರೆ.

ಟ್ವಿಟರ್‌ನಲ್ಲೂ ಶೇರ್‌ ಆಗಿರುವ ಈ ವಿಡಿಯೋ, ಅಲ್ಲಿ ಇನ್ನಷ್ಟು ಟೀಕೆಗೆ ಗ್ರಾಸವಾಗಿದೆ. “ಆಕೆಯ ಕೃತಕ ನಗುವಿನ ಹಿಂದಿನ ನೋವು ಬಹುಶಃ ಒಬ್ಬ ಸಿರಿವಂತ ಜೈನ್ ಪುರುಷನಿಂದ ತಿರಸ್ಕೃತಗೊಂಡಿರುವಂತೆ ಇದೆ. ದೇವರು ಆಕೆಗೆ ಧೈರ್ಯ ಕೊಡಲಿ,” ಎಂದು ಕ್ಷೇಶ್ಮಿತಾ ಜೈನ್ ಎಂಬ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಆಂಟಿಜಿ ! ಸಸ್ಯಾಹಾರಿಗಳಾಗುವ ಮೂಲಕ ಕೆಟ್ಟ ಶಕ್ತಿಗಳನ್ನು ದೂರ ಇಡಬಹುದು ಎಂದು ಪುರುಷರಿಗೆ ಅರಿವು ಮೂಡಿಸಿದ್ದಕ್ಕೆ ಧನ್ಯವಾದ,” ಎಂದು ಮಸಾಲೆ ದೋಸೆ ಹೆಸರಿನ ಕನ್ನಡಿಗ ಟ್ವಿಟ್ಟಿಗರೊಬ್ಬರು ತಿಳಿಸಿದ್ದಾರೆ.

“ಸಸ್ಯಾಹಾರಿಯೋ ಅಥವಾ ಮತ್ತೊಂದೋ – ಮೊದಲು ಇಂಥ ಮಹಿಳೆಯನ್ನು ಯಾವ ಪುರುಷನಾದರೂ ಬಯಸುತ್ತಾನೆಯೇ ಎಂದು ನನಗೆ ಬಲವಾದ ಅನುಮಾನ ಇದೆ. ಟೀಕೆ ಮಾಡುವ ಭರದಲ್ಲಿ ಆಕೆ ತನ್ನ ಹತಾಶೆಯನ್ನು ಹೊರ ಹಾಕುತ್ತಿದ್ದಾಳೆ. ಆಕೆ ಅತ್ಯಂತ ಹೆಚ್ಚಾಗಿ ಏನನ್ನು ಶಾಪ್ ಮಾಡುತ್ತಾಳೆ ಎಂಬುದನ್ನೂ ನಾನು ಅಂದಾಜಿಸಬಲ್ಲೆ. ಕೆಲವೊಂದು ವಸ್ತುಗಳನ್ನು ಅತಿಯಾಗಿ ಬಳಸುವ ಕಾರಣ ಪದೇ ಪದೇ ಆರ್ಡರ್‌ ಮಾಡಬೇಕಾಗಿ ಬರಬಹುದು,” ಎಂದು ಮಂದಾ ಬೇಂದ್ರೆ ಎಂಬ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...