ಜನರ ಕಣ್ಣಲ್ಲಿ ಒಮ್ಮೆ ಸೆಲೆಬ್ರಿಟಿಗಳಂತೆ ಕಾಣಿಸಿದ್ರೆ ಮುಗೀತು. ನೀವು ಏನೇ ಮಾಡಿದರು ಅದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿಬಿಡುತ್ತೆ. ಅದೇ ರೀತಿ ವಿಮಾನದ ಬ್ಯುಸಿನೆಸ್ ಕ್ಲಾಸ್ನಲ್ಲಿ ಫೊಟೋ ತೆಗೆದು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದ ಇನ್ಫ್ಲ್ಯೂಯೆನ್ಸರ್ ಒಬ್ಬಾಕೆ ಇದೀಗ ಮುಜುಗರ ಎದುರಿಸುತ್ತಿದ್ದಾಳೆ.
ಫ್ರಾನ್ಸ್ನ 27 ವರ್ಷದ ಓಷಿಯನ್ ಎಲ್ ಹಿಮರ್ ಎಂಬಾಕೆ ಇನ್ಸ್ಟಾಗ್ರಾಂನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾಳೆ. ವಿಮಾನದಲ್ಲಿ ಸಾಮಾನ್ಯ ಸೀಟನ್ನು ಬುಕ್ ಮಾಡಿದ ಈಕೆ ಬ್ಯುಸಿನೆಸ್ ಕ್ಲಾಸ್ ವಿಭಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಆ ಫೋಟೊವನ್ನ ಶೇರ್ ಮಾಡಿದ್ದಳು.
ಆದರೆ ಕತೆ ಇಲ್ಲಿಗೆ ಮುಗಿಯಲಿಲ್ಲ. ಈಕೆ ಸಾಮಾನ್ಯ ದರ್ಜೆಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವ ಫೋಟೋವನ್ನ ಅಭಿಮಾನಿಯೊಬ್ಬ ಕ್ಲಿಕ್ಕಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಎರಡೂ ಫೋಟೋಗಳಲ್ಲಿ ಈಕೆ ಒಂದೇ ಡ್ರೆಸ್ ಧರಿಸಿರೋದ್ರಿಂದ ಈಕೆಯ ಕಳ್ಳಾಟ ಅಭಿಮಾನಿಗಳ ಎದುರು ಬಟಾಬಯಲಾಗಿದೆ. ನೆಟ್ಟಿಗರು ಇದೀಗ ಈಕೆಯ ಕಾಲನ್ನ ಸರಿಯಾಗೇ ಎಳೆಯುತ್ತಿದ್ದಾರೆ.