ದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಐಎಎಫ್ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಈ ವೇಳೆ ಮಗುವನ್ನು ಹುಡುಗಿಯೊಬ್ಬಳು ಮುದ್ದಾಡಿದ ಮನಕಲಕುವ ದೃಶ್ಯ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಹೌದು, 168 ಜನರನ್ನು ಹೊತ್ತ ಭಾರತೀಯ ವಾಯುಪಡೆಯು ಕಾಬೂಲ್ ನಿಂದ ದೆಹಲಿ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಇಳಿದಿದೆ. ಈ ವೇಳೆ ಪಾಸ್ ಪೋರ್ಟ್ ಇಲ್ಲದ ಮಗುವನ್ನು ಕೂಡ ಕರೆತರಲಾಗಿದೆ.
ದಿಢೀರನೇ ಮಾಡಿ ರವಾ ಬರ್ಫಿ
ಟ್ವಿಟ್ಟರ್ ನಲ್ಲಿ ಎ ಎನ್ ಐ ವಿಡಿಯೋ ಹಂಚಿಕೊಂಡಿದ್ದು, ತಾಯಿಯ ತೋಳಿನಲ್ಲಿ ಬಂಧಿಯಾಗಿದ್ದ ಪುಟ್ಟ ಮಗುವನ್ನು ಬಾಲಕಿಯೊಬ್ಬಳು ಸಂತೋಷದಿಂದ ಅಪ್ಪಿ, ಮುದ್ದಾಡಿದ್ದಾಳೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
“ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಹೀಗಾಗಿ ನಾನು ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದೆವು. ಭಾರತೀಯ ಸಹೋದರ-ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನ್ ನಮ್ಮ ಮನೆಯನ್ನು ಸುಟ್ಟು ಹಾಕಿದರು. ಸಹಾಯ ಮಾಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ” ಎಂದು ಸ್ಥಳಾಂತರವಾದ ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
https://twitter.com/ANI/status/1429324388420112384?ref_src=twsrc%5Etfw%7Ctwcamp%5Etweetembed%7Ctwterm%5E1429324388420112384%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-infant-without-passport-gets-evacuated-from-kabul-by-iaf-video-of-girl-kissing-the-child-goes-viral%2F802208