alex Certify ವಿಶ್ವದ ʼದಿ ಬೆಸ್ಟ್​ ವಿಸ್ಕಿʼ ಅವಾರ್ಡ್ ಪಡೆದುಕೊಂಡಿದೆ ಈ ಭಾರತೀಯ ಬ್ರಾಂಡ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ʼದಿ ಬೆಸ್ಟ್​ ವಿಸ್ಕಿʼ ಅವಾರ್ಡ್ ಪಡೆದುಕೊಂಡಿದೆ ಈ ಭಾರತೀಯ ಬ್ರಾಂಡ್‌ !

ಇಂದ್ರಿ ಎಂಬ ಹೆಸರಿನ ಭಾರತೀಯ ಮಾಲ್ಟ್​ ವಿಸ್ಕಿ ಇತ್ತೀಚಿಗೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೊಸ ದಾಖಲೆ ನಿರ್ಮಿಸಿದೆ. ಸಾಂಪ್ರದಾಯಿಕವಾಗಿ ತನ್ನ ರೋಮಾಂಚಕ ವೈವಿಧ್ಯ ಹಾಗೂ ಪರಂಪರಾಗತ ರುಚಿಗಾಗಿ ಈ ವಿಸ್ಕಿ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಈ ವಿಸ್ಕಿ ಜಗತ್ತಿನ ವಿಶೇಷ ಮನ್ನಣೆ ಗಳಿಸಿದೆ.

ಇಂದ್ರಿಯ ದೀಪಾವಳಿ ವಿಶೇಷ ಕಲೆಕ್ಟರ್ಸ್​ 2023ನೇ ಆವೃತ್ತಿಯಲ್ಲಿ ಇತ್ತೀಚೆಗೆ ಪ್ರತಿಷ್ಠಿತ ವಿಸ್ಕಿಸ್​ ಆಫ್​ ಧಿ ವರ್ಲ್ಡ್​​ ಅವಾರ್ಡ್ಸ್​​ನಲ್ಲಿ ಉನ್ನತ ಗೌರವ ಪಡೆದುಕೊಂಡಿದೆ. ವಿಸ್ಕಿಸ್​​ ಆಫ್​ ದಿ ವರ್ಲ್ಡ್​​ ಅವಾರ್ಡ್ಸ್​​​ನಲ್ಲಿ ಬೆಸ್ಟ್​ ಇನ್​ ಶೋ ಡಬಲ್​ ಗೋಲ್ಡ್​ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪಿಕ್ಕಾಡಿಲಿ ಡಿಸ್ಟಿಲರೀಸ್‌ನಿಂದ ಸ್ವದೇಶಿ ಬ್ರಾಂಡ್ ಇಂದ್ರಿ ತನ್ನ ಪ್ರಯಾಣವನ್ನು ಇಂದ್ರಿ-ಟ್ರಿನಿ ಎಂದು ಕರೆಯಲಾಗುವ ಭಾರತದ ಮೊದಲ ಟ್ರಿಪಲ್-ಬ್ಯಾರೆಲ್ ಸಿಂಗಲ್ ಮಾಲ್ಟ್‌ನೊಂದಿಗೆ ಆರಂಭಿಸಿದೆ. 2021 ರಲ್ಲಿ ಪ್ರಾರಂಭವಾದ ಈ ಬ್ರ್ಯಾಂಡ್ 14 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ.

ಬೆಳೆಯುತ್ತಿರುವ ಮದ್ಯಪಾನ ಮಾರುಕಟ್ಟೆಯಲ್ಲಿ ವಿಸ್ಕಿ ಪ್ರಿಯರಿಗೆ ಭಾರತೀಯ ಬ್ರ್ಯಾಂಡ್​ಗಳು ಹೆಚ್ಚು ಇಷ್ಟವಾಗುತ್ತಿವೆ. ಸಿಂಗಲ್​ ಮಾಲ್ಟ್​ಗಳು ಹಾಗೂ ಬ್ಲೆಂಡ್ಸ್​​ಗಳು ಹೀಗೆ ವಿಸ್ಕಿಯು ವ್ಯಾಪಕ ಶ್ರೇಣಿಗಳನ್ನು ಹೊಂದಿದೆ. ಈ ವಿಸ್ಕಿ ಬ್ರ್ಯಾಂಡ್​ಗಳು ವಿಶಿಷ್ಟವಾದ ಪ್ರಾದೇಶಿಕ ಸುವಾಸನೆ ಹಾಗೂ ಅರೊಮ್ಯಾಟಿಕ್​ ಪ್ರೊಫೈಲ್​ಗಳನ್ನು ಹೊಂದಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...