alex Certify 8ನೇ ಕ್ಲಾಸ್ ವಿದ್ಯಾರ್ಥಿನಿಗೆ ಲವ್‌ ಲೆಟರ್‌ ಬರೆದು ಸಿಕ್ಕಿಬಿದ್ದ ಶಿಕ್ಷಕನ ತಲೆ ಬೋಳಿಸಿ ಮೆರವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8ನೇ ಕ್ಲಾಸ್ ವಿದ್ಯಾರ್ಥಿನಿಗೆ ಲವ್‌ ಲೆಟರ್‌ ಬರೆದು ಸಿಕ್ಕಿಬಿದ್ದ ಶಿಕ್ಷಕನ ತಲೆ ಬೋಳಿಸಿ ಮೆರವಣಿಗೆ

ತಾನು ಪಾಠ ಹೇಳುವ 13 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮಪತ್ರ ಬರೆದು ಕಳುಹಿಸಿದ್ದ 24 ವರ್ಷದ ಶಿಕ್ಷಕನೊಬ್ಬನಿಗೆ ಸ್ಥಳೀಯರು ಚೆನ್ನಾಗಿ ಥಳಿಸಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಪೆರೇಡ್ ಮಾಡಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ ಬಳಿಯ ಮಾನ್ಪುರಲ್ಲಿ ಜರುಗಿದೆ.

ಹೊಸ ಕಾರ್ ಹೊಂದುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಮೈಸೂರು, ಮಂಗಳೂರಲ್ಲೂ ಹೊಸ ಕಾರು ಬಾಡಿಗೆಗೆ

ಆಪಾದಿತ ಶಿಕ್ಷಕ ವೈಭವ್‌ ನಾಯಕ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯಿದೆ ( ಪೋಕ್ಸೋ) ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಈತ ಉತ್ತರ ಪ್ರದೇಶದ ಝಾನ್ಸಿಯವನು ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಪಾಳಿಯ ಪುಟ್ಟ ಬ್ರೇಕ್‌ನಲ್ಲಿ ಮನಸ್ಸು ಹಗುರ ಮಾಡಿಕೊಂಡ ಕೋವಿಡ್ ಡ್ಯೂಟಿ ಚಾಲಕರು

ಕಳೆದೊಂದು ವರ್ಷದಿಂದ ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿರುವ ಈ ಶಿಕ್ಷಕ 8ನೇ ತರಗತಿ ಬಾಲಕಿಗೆ ಪ್ರೇಮಪತ್ರ ಬರೆದು ತನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದ.

ಕೂಡಲೇ ತನ್ನ ಪೋಷಕರಿಗೆ ಈ ವಿಚಾರವನ್ನು ಬಾಲಕಿ ಮುಟ್ಟಿಸಿದ್ದಾಳೆ. ಶಿಕ್ಷಕನ ವಿರುದ್ಧ ಸಿಟ್ಟಿಗೆದ್ದ ಬಾಲಕಿಯ ಹೆತ್ತವರು ಹಾಗೂ ಬಂಧುಗಳು ಶಿಕ್ಷಕನನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...