alex Certify ನಾಯಿಗಳಿಗಾಗಿಯೇ ಶುರುವಾಗಿದೆ ಈ ರೆಸ್ಟೋರೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಗಳಿಗಾಗಿಯೇ ಶುರುವಾಗಿದೆ ಈ ರೆಸ್ಟೋರೆಂಟ್

ಶ್ವಾನಗಳನ್ನು ಪ್ರೀತಿಯಿಂದ ಸಾಕುವವರು ಅವುಗಳಿಗೆ ನೀಡುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿರ್ತಾರೆ. ಸಾಕು ನಾಯಿಗಳಿಗೆ ನೀಡುವ ಆಹಾರವನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಧ್ಯಪ್ರದೇಶದಲ್ಲಿ ಆರಂಭವಾಗಿದೆ. ಅದುವೇ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ‘ಡಾಗಿ ಡಾಬಾ’. ಡಾಗಿ ಡಾಬಾದಲ್ಲಿ ನಾಯಿಗಳಿಗೆ ನೀಡುವ ಆಹಾರ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಶ್ವಾನಪ್ರಿಯರಾದ ಬಾಲರಾಜ್ ಝಾಲಾ ಮತ್ತು ಅವರ ಪತ್ನಿ ಈ ಡಾಬಾವನ್ನ ಸ್ಥಾಪಿಸಿದ್ದಾರೆ. ಡಾಬಾದಲ್ಲಿ ನಾಯಿಗಳಿಗೆ ಆಹಾರ, ವಸತಿ ಮತ್ತು ಹುಟ್ಟುಹಬ್ಬದ ಆಚರಣೆಯ ಆಯ್ಕೆಗಳನ್ನು ನೀಡುತ್ತದೆ ಮತ್ತು ಸಾಕುನಾಯಿಗೆ ಆಹಾರ ವಿತರಣಾ ಸೇವೆಗಳನ್ನು ಸಹ ನೀಡಲಾಗುತ್ತದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಶೇಷತೆಗಳನ್ನೊಳಗೊಂಡಂತೆ ಅತಿ ಕಡಿಮೆ ಬೆಲೆ 7 ರೂಪಾಯಿಯಿಂದ ಹಿಡಿದು 500 ರೂ. ವರೆಗಿನ ಬೆಲೆಯಲ್ಲಿ ಡಾಬಾದಲ್ಲಿ ವಿವಿಧ ನಾಯಿ ಆಹಾರವನ್ನು ಒದಗಿಸಲಾಗುತ್ತದೆ. ಹೆಚ್ಚುವರಿಯಾಗಿ ನಾಯಿಗಳ ಜನ್ಮದಿನ ಆಚರಣೆಗಾಗಿ ವೈಯಕ್ತಿಕ ವಿಶೇಷ ಕೇಕ್ ಗಳನ್ನೂ ಸಹ ತಯಾರಿಸಲಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...