
ಅತ್ಯಾಚಾರ ಪ್ರಕರಣದಡಿಯಲ್ಲಿ ಇಂದೋರ್ ಕಾಂಗ್ರೆಸ್ ಶಾಸಕನ ಪುತ್ರನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಶಾಸಕ ಮುರಳಿ ಮೋರ್ವ್ ಪುತ್ರ ಕರಣ್ ಮೋರ್ವಲ್ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಣೆ ಮಾಡಿದ್ದರು.
ಅತ್ಯಾಚಾರ ಆರೋಪವನ್ನು ಹೊತ್ತಿದ್ದ ಕರಣ್ ಮೋರ್ವಲ್ ಕಳೆದ ಐದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ. ಈತನನ್ನು ಹುಡುಕಿಕೊಟ್ಟವರಿಗೆ 15 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಪೊಲೀಸರು ಕೆಲ ದಿನಗಳ ಹಿಂದಷ್ಟೇ ಈ ಮೊತ್ತವನ್ನು 20 ಸಾವಿರ ರೂಪಾಯಿಗೆ ಏರಿಕೆ ಮಾಡಿದ್ದರು.
BIG NEWS: ‘ಸೂಟ್ ಕೇಸ್’ ಆರೋಪಕ್ಕೆ ತಿರುಗಿಬಿದ್ದ HDK; ವಚನ ಭ್ರಷ್ಟ ಕಳಂಕದ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ
ಇಂದೋರ್ನ ಬದ್ನಾಗರ್ನಲ್ಲಿ ಪೊಲೀಸರು ಆರೋಪಿ ಕರಣ್ ಮೋರ್ವಲ್ನನ್ನು ಬಂಧಿಸಿದ್ದಾರೆ. ಆರೋಪಿ ಕರಣ್ ಮೋರ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.