
ಈ ಚಿತ್ರದಲ್ಲಿ ಭಾರೀ ಹಿಟ್ ಆದ ಹಾಡುಗಳಲ್ಲಿ ಒಂದು ’ನಜಾ’. ಈ ಹಾಡಿಗೆ ಅಭಿಮಾನಿಗಳಿಬ್ಬರು ಸ್ಟೆಪ್ ಹಾಕಿರುವ ವಿಡಿಯೋವೊಂದು ವೈರಲ್ ಆಗಿದೆ. ನಜಾ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್‌ರಂತೆಯೇ ಕಾಸ್ಟ್ಯೂಮ್ ಧರಿಸಿರುವ ಈ ಪುರುಷ ಹಾಗೂ ಮಹಿಳೆ ಇಬ್ಬರೂ ಅವರಂತೆಯೇ ಸ್ಟೆಪ್ ಹಾಕಿದ್ದಾರೆ.
ಜೀವನ ನಿರ್ವಹಣೆಗಾಗಿ ಮದ್ಯದಂಗಡಿ ತೆರೆದ ಹಾಸ್ಯನಟ….!
ಇಂಡೋನೇಷ್ಯಾದ ಯೂಟ್ಯೂಬರ್ ಹಾಗೂ ಡ್ಯಾನ್ಸರ್ ವಿನಾ ಫಾನ್ ಈ ವಿಡಿಯೋವನ್ನು ಮೊದಲ ಬಾರಿಗೆ ಶೇರ್ ಮಾಡಿದ್ದರು. ಬಳಿಕ ಈ ವಿಡಿಯೋ ಅಕ್ಷಯ್ ಕುಮಾರ್ ಗಮನ ಸೆಳೆದಿದ್ದು, “ಈ ಮರುಸೃಷ್ಟಿ ನನಗೆ ಇಷ್ಟವಾಗಿದೆ, ಅದ್ಭುತ ಪ್ರಯತ್ನ,” ಎಂದು ಖಿಲಾಡಿ ನಟ ರೀಟ್ವಿಟ್ ಮಾಡಿದ್ದಾರೆ.
ವಿಡಿಯೋದಲ್ಲಿರುವ ಮಹಿಳೆ ನಜಾ ಹಾಡಿನ ಡ್ಯಾನ್ಸ್‌ನಲ್ಲಿ ಕತ್ರಿನಾ ಧರಿಸಿರುವ ಬಟ್ಟೆಯಂತದ್ದನ್ನೇ ಹಾಕಿದ್ದು, ಪುರುಷ ಅಕ್ಷಯ್ ಕುಮಾರ್‌ರ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ.