ಹೆಚ್ಚಿನ ಪುರುಷರು ತಾವು ಊಟ ಮಾಡಿದ ನಂತರ ತಮ್ಮ ತಟ್ಟೆ, ಲೋಟವನ್ನು ಮೇಜಿನ ಮೇಲೆ ಹಾಗೆಯೇ ಬಿಡುತ್ತಾರೆ. ಹೆಂಡತಿ ಇದ್ದಾಳೆಯಲ್ವಾ ತೊಳೆಯಲಿ ಎಂಬ ಅಸಡ್ಡೆ ಇದಕ್ಕೆ ಕಾರಣವಿರಬಹುದು. ಆದರೆ, ಇಂಡೋನೇಷ್ಯಾದಲ್ಲಿ ತಟ್ಟೆ ತೊಳೆಯದೇ ಪತಿ ಬಿಟ್ಟು ಹೋಗಿದ್ದಕ್ಕೆ ಹೆಂಡತಿ ಏನು ಮಾಡಿದಳು ಗೊತ್ತಾ..? ಈ ಸ್ಟೋರಿ ಓದಿ..
ಇಂಡೋನೇಷ್ಯಾದಲ್ಲಿ ಊಟ ಮಾಡಿದ ನಂತರ ತನ್ನ ತಟ್ಟೆ ಹಾಗೂ ಲೋಟವನ್ನು ತೊಳೆಯದೆ ಗಂಡ ಎದ್ದು ಹೋಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿ ಆತನ ಎಂಜಲು ತಟ್ಟೆ, ಲೋಟವನ್ನು ಹೊರಗೆಸೆದಿದ್ದಾಳೆ. ಇವು ಗಾಜಿನದ್ದಾಗಿದ್ದರಿಂದ ಪುಡಿಪುಡಿಯಾಗಿದೆ.
’ಡ್ರೀಮ್‌ಗರ್ಲ್ ಸದಾ ’ತಮ್ಮೊಂದಿಗೆ ಒಯ್ಯುವ ಪರ್ಸ್ ನಲ್ಲಿ ಏನೇನಿರುತ್ತೆ….?
ಇದರ ವಿಡಿಯೋ ಮಾಡಿ ಸ್ವತಃ ಪತ್ನಿಯೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. “ನಿಮ್ಮ ಹೆಂಡತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ” ಎಂದು ಬರೆದಿದ್ದಾಳೆ. “ನನಗೆ ಕುತೂಹಲವಿದೆ, ಪುರುಷರೇ. ನೀವು ತಿಂದು ಮುಗಿಸಿದ ನಂತರ, ನೀವು ಎಲ್ಲವನ್ನೂ ಅಲ್ಲಿಯೇ ಬಿಟ್ಟಿದ್ದೀರಾ? ನೀವು ಬಳಸಿದ ತಟ್ಟೆ ಮತ್ತು ಪಾತ್ರೆಗಳನ್ನು ತೊಳೆಯುವುದರಲ್ಲಿ ಏನು ತಪ್ಪಿದೆ?” ಎಂದು ಪುರುಷರಲ್ಲಿ ಆಕೆ ಪ್ರಶ್ನಿಸಿದ್ದಾಳೆ.
ಪತಿ ಪಾತ್ರೆ ತೊಳೆಯಲು ಹೋಗದಿದ್ದರೆ, ಕನಿಷ್ಠ ಅವುಗಳನ್ನು ಸಿಂಕ್‌ನಲ್ಲಿ ಹಾಕಬಹುದು ಎಂದು ಕೆಲವರು ಅಭಿಪ್ರಾಯಪಟ್ಟರು. ಇದು ಆನ್‌ಲೈನ್ ನಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಇತರರು ಅದನ್ನು ಕೇವಲ ಒಂದು ಪ್ಲೇಟ್ ಆಗಿರುವುದರಿಂದ ಅದನ್ನು ತೊಳೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಬೇಡವೆಂದು ನೆಲದ ಮೇಲೆ ಹೊರಳಾಡಿ ಗೋಳಿಟ್ಟ ವೃದ್ಧೆ..! ಮಹಿಳೆ ರಂಪಾಟ ಕಂಡು ಆರೋಗ್ಯ ಸಿಬ್ಬಂದಿ ಸುಸ್ತೋಸುಸ್ತು
ಇನ್ನು ಸಮಸ್ಯೆಯನ್ನು ಪರಿಹರಿಸಲು ಒಬ್ಬರು, ಬಾಳೆಎಲೆಗಳನ್ನು ಬಳಸಬಹುದು ಎಂದು ಸಲಹೆ ನೀಡಿದ್ದಾರೆ. “ಬಾಳೆಎಲೆಯನ್ನು ಬಳಸಿ, ನೀವು ಮೇಲಿನ ಆಹಾರಗಳನ್ನು ತಿಂದು ಮುಗಿಸಿದಾಗ, ನಂತರ ಎಲೆಯನ್ನು ಸಹ ತಿನ್ನಬಹುದು. ಸಮಸ್ಯೆ ಬಗೆಹರಿಯುತ್ತದೆ” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.