alex Certify ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಾಂತ್ರಿಕ ದೋಷದ ಬೆನ್ನಲ್ಲೇ ಕರಾಚಿಯಲ್ಲಿ ಲ್ಯಾಂಡಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಾಂತ್ರಿಕ ದೋಷದ ಬೆನ್ನಲ್ಲೇ ಕರಾಚಿಯಲ್ಲಿ ಲ್ಯಾಂಡಿಂಗ್

ಶಾರ್ಜಾ-ಹೈದರಾಬಾದ್ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ನಂತರ ಬಜೆಟ್ ಕ್ಯಾರಿಯರ್ ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ತಿರುಗಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಗುತ್ತಿದೆ. ವಿಮಾನಯಾನ ಸಂಸ್ಥೆಯು ಕರಾಚಿಗೆ ಮತ್ತೊಂದು ವಿಮಾನವನ್ನು ಕಳುಹಿಸಲು ಯೋಜಿಸುತ್ತಿದೆ. 2 ವಾರಗಳಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಿದ ಎರಡನೇ ಭಾರತೀಯ ವಿಮಾನಯಾನ ಸಂಸ್ಥೆ ಇದಾಗಿದೆ.

ಶಾರ್ಜಾ-ಹೈದರಾಬಾದ್ ವಿಮಾನದ ಪೈಲಟ್ ವಿಮಾನದಲ್ಲಿ ತಾಂತ್ರಿಕ ದೋಷವನ್ನು ಗಮನಿಸಿದ ನಂತರ, ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ತಿರುಗಿಸಲಾಯಿತು. ಪ್ರಯಾಣಿಕರನ್ನು ಹೈದರಾಬಾದ್‌ ಗೆ ಕರೆತರಲು ಹೆಚ್ಚುವರಿ ವಿಮಾನವನ್ನು ಕರಾಚಿಗೆ ಕಳುಹಿಸಲಾಗುತ್ತಿದೆ ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...